ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಯಿಡಾ | ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ರೀಲ್ಸ್: ಮೂವರ ಬಂಧನ

Published 11 ಏಪ್ರಿಲ್ 2024, 13:22 IST
Last Updated 11 ಏಪ್ರಿಲ್ 2024, 13:22 IST
ಅಕ್ಷರ ಗಾತ್ರ

ನೊಯಿಡಾ: ‘ರೀಲ್ಸ್’ ಮಾಡುತ್ತ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಉತ್ತರ ಪ್ರದೇಶದ ನೊಯಿಡಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಗರದ ರಸ್ತೆಗಳಲ್ಲಿ ಹೆಲ್ಮೆಟ್ ಧರಿಸದೆ ಹಾಗೂ ಅಜಾಗರೂಕತೆಯಿಂದ ಸ್ಕೂಟರ್‌ ಚಾಲನೆ ಮಾಡಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ವಿಡಿಯೊ ಅಶ್ಲೀಲವಾಗಿವೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ ಬಳಿಕ ಮೂವರನ್ನು ಬಂಧಿಸಲಾಗಿದೆ. ಅಲ್ಲದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ₹80,500 ದಂಡ ವಿಧಿಸಲಾಗಿದೆ. 

ಮೂವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಲಾಗಿದೆ. ಜಮುನಾ ಪ್ರಸಾದ್‌ ಅಲಿಯಾಸ್‌ ಪಿಯೂಷ್‌ ಎಂಬ ವ್ಯಕ್ತಿ ಅಜಾಗರೂಕತೆಯಿಂದ ಸ್ಕೂಟರ್‌ ಚಲಾಯಿಸುತ್ತಿದ್ದರೆ, ವಿನಿತಾ ಮತ್ತು ಪ್ರೀತಿ ಎಂಬ ಮಹಿಳೆಯರು ಅಶ್ಲೀಲವಾಗಿ ವರ್ತಿಸಿದ್ದರು. ವಿನಿತಾ ಎಂಬಾಕೆಯ ಹೆಸರಿನಲ್ಲಿ ಸ್ಕೂಟರ್‌ ನೊಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT