ಕಾಯ್ದೆಯು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂದು ನಾವು ಹೇಳುತ್ತಾ ಬಂದಿದ್ದೇವೆ. ಸುಪ್ರೀಂ ಕೋರ್ಟ್ ಅದನ್ನು ಅರ್ಥಮಾಡಿ ಕೊಂಡಿರುವುದು ಸಮಾಧಾನಕರ.
– ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ
ಮಧ್ಯಂತರ ಆದೇಶವು ಮೋದಿ ಸರ್ಕಾರ ಮಾಡಿದ ಕಾಯ್ದೆಯಿಂದ ವಕ್ಫ್ ಆಸ್ತಿಯನ್ನು ರಕ್ಷಿಸುವುದಿಲ್ಲ. ಸುಪ್ರೀಂ ಕೋರ್ಟ್ ಶೀಘ್ರ ಅಂತಿಮ ತೀರ್ಪು ಪ್ರಕಟಿಸಲಿದೆ ಎಂದು ಭಾವಿಸುತ್ತೇವೆ.
– ಅಸಾದುದ್ದೀನ್ ಓವೈಸಿ, ಎಐಎಂಐಎಂ ಅಧ್ಯಕ್ಷ
ಅತೃಪ್ತಿಕರ: ಎಐಎಂಪಿಎಲ್‌ಬಿ
ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ‘ಅತೃಪ್ತಿಕರ’ ಎಂದು ಪ್ರತಿಕ್ರಿಯಿಸಿದೆ. ಇಡೀ ಕಾಯ್ದೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿರು ವುದರಿಂದ ‘ಬಳಕೆಯ ಕಾರಣದಿಂದಾಗಿ ವಕ್ಫ್’ ಸೇರಿದಂತೆ ಹಲವು ವಿವಾದಿತ ಅಂಶಗಳು ಕಾರ್ಯರೂಪಕ್ಕೆ ಬರಲು ಹಾದಿಯೊದಗಿಸಿದೆ ಎಂದು ಹೇಳಿದೆ. ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಪೂರ್ಣ ತಡೆಯಾಜ್ಞೆ ನೀಡಬೇಕು ಎಂದು ಮಂಡಳಿಯ ವಕ್ತಾರ ಎಸ್.ಕ್ಯು.ಆರ್ ಇಲ್ಯಾಸ್ ಒತ್ತಾಯಿಸಿದ್ದಾರೆ.