ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಳಕೆಗಿಲ್ಲ ವಿವೇಚನೆ: ಸಮೀಕ್ಷೆ ಕಳವಳ

2018–19ರ ಆರ್ಥಿಕ ಸಮೀಕ್ಷೆ ಸಂಸತ್ತಿನಲ್ಲಿ ಮಂಡನೆ; ಸುಧಾರಣೆಯ ಹಲವು ಮಜಲುಗಳತ್ತ ದೃಷ್ಟಿ
Last Updated 4 ಜುಲೈ 2019, 19:57 IST
ಅಕ್ಷರ ಗಾತ್ರ

ನವದೆಹಲಿ: ನೀರಿನ ವಿವೇಚನಾರಹಿತ ಬಳಕೆಯ ಬಗ್ಗೆ ಆರ್ಥಿಕ ಸಮೀಕ್ಷೆಯು ಕಳವಳ ವ್ಯಕ್ತಪಡಿಸಿದೆ. ನೀರಿನ ಪರಿಣಾಮಕಾರಿ ಬಳಕೆಗೆ ರೈತರಿಗೆ ಪ್ರೋತ್ಸಾಹ ನೀಡಬೇಕು. ಹನಿ ನೀರಾವರಿಗೆ ಒತ್ತು ಕೊಡಬೇಕು ಎಂದು ಪ್ರತಿಪಾದಿಸಿದೆ.

ಅಂತರ್ಜಲದ ಶೇ 89ರಷ್ಟನ್ನು ಕೃಷಿ ಕ್ಷೇತ್ರವು ಬಳಕೆ ಮಾಡುತ್ತಿದೆ. ಕಬ್ಬಿನಂತಹ ಬೆಳೆಗಳು ನೀರಾವರಿಯ ಶೇ 60ರಷ್ಟನ್ನು ಬಳಸುತ್ತವೆ. 2050ರ ಹೊತ್ತಿಗೆ ಭಾರತವು ಜಾಗತಿಕ ನೀರಿನ ಬಿಕ್ಕಟ್ಟಿನ ಕೇಂದ್ರವಾಗಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿನಲ್ಲಿ ಗುರುವಾರ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಕೃಷಿಯ ಗಮನವು ಜಮೀನಿನ ಉತ್ಪಾದಕತೆಯಿಂದ ನೀರಿನ ಉತ್ಪಾದಕತೆಯತ್ತ ಹೊರಳಬೇಕಿದೆ. ಭಾರತದಲ್ಲಿ ಜಾಸ್ತಿ ನೀರು ಬೇಡುವ ಬೆಳೆಗಳನ್ನೇ ಬೆಳೆಯಲಾಗುತ್ತಿದೆ. ಇದು ಬದಲಾಗಬೇಕಿದೆ ಎಂದು ಸಮೀಕ್ಷೆಯು ಅಭಿಪ್ರಾಯಪಟ್ಟಿದೆ.

ಬೆಂಬಲ ಬೆಲೆ, ವಿದ್ಯುತ್‌, ನೀರು ಮತ್ತು ರಸಗೊಬ್ಬರಗಳಿಗೆ ಭಾರಿ ಸಹಾಯಧನಗಳು ಬೆಳೆ ವಿನ್ಯಾಸ ಹಾಳಾಗುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಹಾಗಾಗಿಯೇ ಈಗ, ನೀರಿನ ಪರಿಣಾಮಕಾರಿ ಬಳಕೆಗೆ ಉತ್ತೇಜನ ನೀಡುವ ಸ್ಥಿತಿ ನಿರ್ಮಾಣವಾಗಿದೆ.

ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಈಗಿನ ರೀತಿಯಲ್ಲಿ ಕೃಷಿಗೆ ಅಂತರ್ಜಲ ಬಳಕೆ ಸಾಧ್ಯವೇ ಎಂಬ ಪ್ರಶ್ನೆಯನ್ನು ಸಮೀಕ್ಷೆಯು ಮುಂದಿಟ್ಟಿದೆ.

ಸ್ಥಳೀಯ ಕೃಷಿ–ಅರ್ಥ ವ್ಯವಸ್ಥೆಗೆ ಹೊಂದಿಕೆಯಾಗುವ ಬೇಸಾಯ ಕ್ರಮಗಳನ್ನು ರೂಢಿಸಿಕೊಳ್ಳಬೇಕಿದೆ. ಸುಸ್ಥಿರ ನೀರಿನ ಬಳಕೆಯ ಕೃಷಿಗೆ ಒತ್ತು ನೀಡಬೇಕಿದೆ. ಲಭ್ಯ ಸಂಪನ್ಮೂಲದ ಗರಿಷ್ಠ ಬಳಕೆಯತ್ತ ಗಮನ ಹರಿಸಬೇಕಿದೆ.

ಬೇಸಾಯದ ಯಾಂತ್ರೀಕರಣ ಈಗಿನ ಅಗತ್ಯವಾಗಿದೆ. ಆದರೆ, ಕೃಷಿ ಯಂತ್ರಗಳು ದುಬಾರಿ. ಹಾಗಾಗಿ ಕೃಷಿ ಯಂತ್ರಗಳನ್ನು ಬಾಡಿಗೆಗೆ ನೀಡುವ ಕೇಂದ್ರಗಳನ್ನು ಆರಂಭಿಸುವ ಅಗತ್ಯ ಇದೆ ಎಂದು ಸಮೀಕ್ಷೆ ಸಲಹೆ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT