ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಣಿವೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ವಿಡಿಜಿ ಸಿಬ್ಬಂದಿಗೆ ಶೂಟಿಂಗ್‌ ತರಬೇತಿ

Published 4 ಜೂನ್ 2024, 15:45 IST
Last Updated 4 ಜೂನ್ 2024, 15:45 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಮ ರಕ್ಷಣಾ ಪಡೆ(ವಿಡಿಜಿ) ಸಿಬ್ಬಂದಿಗೆ ಶೂಟಿಂಗ್‌ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಶಿಬಿರ ಆಯೋಜಿಸಿದ್ದು, ಈ ಶಿಬಿರವು ಒಂದು ವಾರ ಇರಲಿದೆ. ಈ ಶಿಬಿರದಲ್ಲಿ 20 ಮಂದಿ ಮಹಿಳೆಯರು ಸೇರಿ 5547 ಸಿಬ್ಬಂದಿಗೆ ಶೂಟಿಂಗ್‌ ತರಬೇತಿ ನೀಡಿ, ವಿಡಿಜಿ ಸಂಘಟನೆಯನ್ನು ಬಲಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಪೊಲೀಸರು ನಡೆಸುವ ಕಾರ್ಯಾಚರಣೆಗಳಲ್ಲಿ ವಿಡಿಜಿ ಸಿಬ್ಬಂದಿಯ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸುತ್ತೇವೆ ಎಂದು ರಿಯಾಸಿ ಎಸ್‌ಎಸ್‌ಪಿ ಮೋಹಿತ ಶರ್ಮಾ ಹೇಳಿದ್ದಾರೆ. 

‘ವಿಡಿಜಿ ಸಿಬ್ಬಂದಿ ವೃತ್ತಿಪರವಾಗಿ ತರಬೇತಿ ಪಡೆಯದಿದ್ದರೂ ಸ್ವಯಂ ಮತ್ತು ಸಮುದಾಯ ರಕ್ಷಣೆಗೆ ಬದ್ಧರಾಗಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದಾರೆ. ಕಣಿವೆ ಭಾಗದ ಸಂದಿಗ್ಧ ಪ್ರದೇಶಗಳಲ್ಲಿ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರ ಹೆಡೆಮುರಿ ಕಟ್ಟಲು ವಿಡಿಜಿ ಪಡೆಯು ಅತ್ಯಂತ ಪರಿಣಾಮಕಾರಿ ಸಂಘಟನೆಯಾಗಿದೆ. ಹಾಗಾಗಿ, ವಿಡಿಜಿ ಸಿಬ್ಬಂದಿಯ ಕೌಶಲ್ಯ ವರ್ಧನೆಗೆ ಈ ತರಬೇತಿ ಶಿಬಿರ ಆಯೋಜಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT