ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್‌ನಲ್ಲಿ 74 ಲಕ್ಷ ಖಾತೆಗಳನ್ನು ‌ನಿಷೇಧಿಸಿದ ವಾಟ್ಸ್‌ಆ್ಯಪ್

Published 2 ಅಕ್ಟೋಬರ್ 2023, 11:11 IST
Last Updated 2 ಅಕ್ಟೋಬರ್ 2023, 11:11 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ತಂತ್ರಜ್ಞಾನದ ನಿಯಮಗಳಿಗೆ ಅನುಗುಣವಾಗಿ ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್ ಆಗಸ್ಟ್‌ನಲ್ಲಿ 74 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ಸಂದೇಶ ವೇದಿಕೆಯ (ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌) ಭಾರತದ ಇತ್ತೀಚಿನ ಮಾಸಿಕ ವರದಿಯು ತಿಳಿಸಿದೆ.

ಇದರಲ್ಲಿ 35 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ದೂರು ಬಾರದಿದ್ದರೂ ಕಂಪನಿಯೇ ಸಕ್ರಿಯ ಪರಿಶೀಲನೆ ಮೂಲಕ ನಿಷೇಧಿಸಿದೆ.

ಬಳಕೆದಾರರಿಂದ ಸ್ವೀಕರಿಸಿದ ದೂರುಗಳ ವಿವರಗಳು, ಅದಕ್ಕೆ ವಾಟ್ಸ್‌ಆ್ಯಪ್‌ನಿಂದ ತೆಗೆದುಕೊಂಡ ಕ್ರಮಗಳು ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನಿಂದನೆಗಳನ್ನು ತಡೆಗಟ್ಟಲು ವಾಟ್ಸ್‌ಆ್ಯಪ್ ತೆಗೆದುಕೊಂಡ ಕ್ರಮಗಳನ್ನು ‘ಬಳಕೆದಾರ ಸುರಕ್ಷತಾ ವರದಿ’ಯು ಒಳಗೊಂಡಿದೆ.

‘ಆಗಸ್ಟ್‌ 1 ರಿಂದ 31ರ ನಡುವೆ ಒಟ್ಟು 74 ಲಕ್ಷ ವಾಟ್ಸ್‌ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಈ ಖಾತೆಗಳಲ್ಲಿ 34 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ದೂರು ಬಾರದಿದ್ದರೂ ಕಂಪನಿಯೇ ಸಕ್ರಿಯ ಪರಿಶೀಲನೆ ಮೂಲಕ ನಿಷೇಧಿಸಿದೆ’ ಎಂದು ವರದಿಯು ಹೇಳಿದೆ.

ಭಾರತ ದೇಶದ ದೂರವಾಣಿ ಕೋಡ್‌ +91 ಮೂಲಕ ಭಾರತೀಯ ಖಾತೆಗಳನ್ನು ಗುರುತಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT