ನವದೆಹಲಿ: ಪ್ರಧಾನಿ ಮೋದಿ ಅವರು ಮೂರು ದಿನಗಳ ಬ್ರೂನೈ ಮತ್ತು ಸಿಂಗಪುರ ಪ್ರವಾಸ ಕೈಗೊಂಡಿರುವ ಬಗ್ಗೆ ಕುಟುಕಿದ ಕಾಂಗ್ರೆಸ್, ‘ಆಗಾಗ ವಿದೇಶಕ್ಕೆ ಹಾರುವವರು, ಸಂಘರ್ಷ ಪೀಡಿತ ಮಣಿಪುರಕ್ಕೆ ಯಾವಾಗ ಭೇಟಿಕೊಡುತ್ತಾರೆ’ ಎಂದು ಪ್ರಶ್ನಿಸಿದೆ.
ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಇಂದು ಬ್ರೂನೈಗೆ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಸಿಂಗಪುರಕ್ಕೆ ತೆರಳಲಿದ್ದಾರೆ.
ಪ್ರಧಾನಿ ಅವರ ವಿದೇಶ ಪ್ರವಾಸ ಕುರಿತು ಟೀಕಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಜೈವಿಕವಾಗಿ ಹುಟ್ಟುಪಡೆದಿಲ್ಲದ ಪ್ರಧಾನಿ ಮೋದಿ ಅವರ ಬ್ರೂನೈ ಭೇಟಿಯನ್ನು ಐತಿಹಾಸಿಕ ಎಂದು ಬಿಂಬಿಸಲಾಗುತ್ತಿದೆ, ನಂತರ ಅವರು ಸಿಂಗಪುರಕ್ಕೆ ಹೋಗುತ್ತಾರೆ. ಹೀಗೆ ಆಗಾಗ ವಿದೇಶಕ್ಕೆ ಪ್ರಯಾಣಿಸುವವರು ತೊಂದರೆಗೊಳಗಾದ ಮಣಿಪುರದ ರಾಜ್ಯಕ್ಕೆ ಮಾನವೀಯ ಭೇಟಿಯನ್ನು ಯಾವಾಗ ಮಾಡುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ ಇಂದಿಗೆ 16 ತಿಂಗಳು ಕಳೆದಿದೆ. ಇಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಹಾರ ಶಿಬಿರಗಳಲ್ಲಿ ನಿರ್ಗತಿಕರಾಗಿ ಬದುಕುತ್ತಿದ್ದಾರೆ. ಇಂದಿಗೂ ಪರಿಸ್ಥಿತಿ ಶಾಂತವಾಗಿಲ್ಲ. ಆದರೆ ಪ್ರಧಾನಿ ಮೋದಿ ಅವರಿಗೆ ಇನ್ನೂ ಮಣಿಪುರಕ್ಕೆ ತೆರಳಿ ತೊಂದರೆಗೊಳಗಾದವರನ್ನು ಭೇಟಿಯಾಗಿ ಸಂವಹನ ನಡೆಸಲು ಸಮಯ ಸಿಕ್ಕಿಲ್ಲ. ಮಣಿಪುರ ಮುಖ್ಯಮಂತ್ರಿ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ. ಅವರಿಂದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ ಎಂದು ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
The non-biological PM is making what is being billed as a 'historic' visit to Brunei, after which he goes to Singapore.
— Jairam Ramesh (@Jairam_Ramesh) September 3, 2024
When is our frequent flyer going to make a 'humanitarian' visit to the troubled state of Manipur?
The situation in Manipur continues to be very tense,…
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.