ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಮು ಗಲಭೆ ವಿಚಾರದಲ್ಲಿ ಪ್ರಧಾನಿ ಮೋದಿ ಏಕೆ ಮೌನ ವಹಿಸಿದ್ದಾರೆ?‍ –ಕಪಿಲ್‌ ಸಿಬಲ್‌

Published : 2 ಏಪ್ರಿಲ್ 2023, 11:18 IST
ಫಾಲೋ ಮಾಡಿ
Comments

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ಭುಗಿಲೆದ್ದಿರುವ ಕೋಮು ಗಲಭೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ವಹಿಸಿದ್ದಾರೆ? ಎಂದು ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಭಾನುವಾರ ಪ್ರಶ್ನಿಸಿದ್ದಾರೆ. ಜೊತೆಗೆ ಹಿಂಸಾಚಾರಕ್ಕೆ 2024ರ ಸಾರ್ವತ್ರಿಕ ಚುನಾವಣೆ ಕಾರಣವಾಗದಿರಲಿ ಎಂದಿದ್ದಾರೆ.

ಬಂಗಾಳ ಮತ್ತು ಬಿಹಾರದಲ್ಲಿ ಬೆಂಕಿ ಹಚ್ಚುವುದನ್ನು ನಿಲ್ಲಿಸಿ, ವಿಷ ಬೀಜ ಬಿತ್ತುವ ಕೆಲಸವನ್ನು ಮಾಡಬೇಡಿ, ಇದರಿಂದ ಸಾಮಾನ್ಯ ವ್ಯಕ್ತಿ ಬಲಿಯಾಗುತ್ತಾನೆ. ಇದು ಕೇವಲ ರಾಜಕಾರಣಿಗಳಿಗೆ ಮತ್ತು ಅವರ ಕಾರ್ಯತಂತ್ರಗಳಿಗೆ ಪ್ರಯೋಜನವಾಗಲಿದೆ ಎಂದು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಮಾತನಾಡಬೇಕು, ಈ ರೀತಿಯ ಹಿಂಸಾಚಾರವನ್ನು ಖಂಡಿಸಬೇಕು. ಈ ಹಿಂಸಾಚಾರದ ನಡುವೆ ಅವರಿಬ್ಬರೂ ಮಾತನಾಡದಿರುವುದು ದುರದೃಷ್ಟಕರ, ಅವರೇಕೆ ಸುಮ್ಮನಿದ್ದಾರೆ?, ಇದು ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಹಿಂಸಾತ್ಮಕ ಪರಿಸರದಿಂದ ದೂರವುಳಿದು ದೇಶ ಮುಂದುವರೆಯಬೇಕಿದೆ ಎಂದರು.

ಗೃಹ ಸಚಿವ ಅಮಿತ್‌ ಶಾ ಅವರು ಭಾನುವಾರ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ ಅರ್ಲೇಕರ್‌ ಅವರ ಬಳಿ ಪರಿಸ್ಥಿತಿ ನಿಯಂತ್ರಿಸಲು ಆದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇಷ್ಟು ಕಾಳಜಿ ಸಾಕಾಗುವುದಿಲ್ಲ ಎಂದು ಸಿಬಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT