ಜೈಪುರ: ಶಾಸಕರ ಕುಂದುಕೊರತೆಗಳಿಗೆ ಸ್ಪಂದಿಸುವುದು ನನ್ನ ಹೊಣೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಆದರೆ, ಶಾಸಕರು ಹೋಗಿದ್ದಾದರೂ ಏಕೆ, ಅವರಿಗೆ ಏನು ಭರವಸೆ ನೀಡಲಾಗಿದೆ ಎಂಬುದನ್ನು ನಾನು ತಿಳಿಯಬಯಸುತ್ತೇನೆ ಎಂದು ಗೆಹ್ಲೋಟ್ ಪ್ರತಿಕ್ರಿಯಿಸಿದರು.

ಯಾರಾದರೂ ಶಾಸಕರು ನನ್ನೊಂದಿಗೆ ಸಮಸ್ಯೆ ಹೇಳಿಕೊಂಡಿದ್ದರೆ ಅದನ್ನು ಬಗೆಹರಿಸುವುದು ನನ್ನ ಹೊಣೆಯಾಗಿತ್ತು. ಅದನ್ನು ಹಿಂದೆಯೂ ಮಾಡಿದ್ದೇನೆ, ಈಗಲೂ ಮಾಡುತ್ತೇನೆ ಎಂದು ಅವರು ಜೈಸೆಲ್ಮೇರ್ಗೆ ತೆರಳುವ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಹೇಳಿದರು.

ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಕ್ರಮವಾಗಿ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಚರ್ಚಿಸಿದ ಹಿಂದೆಯೇ ಗೆಹ್ಲೋಟ್ ಪ್ರತಿಕ್ರಿಯೆ ಹೊರಬಿದ್ದಿದೆ. ಗೆಹ್ಲೋಟ್ ವಿರುದ್ಧ ಬಂಡಾಯ ಎದ್ದಿದ್ದ ಪೈಲಟ್ ಹಾಗೂ ಕೆಲ ಶಾಸಕರು ಕೆಲವು ಸಾಂಸ್ಥಿಕವಾದ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.