ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಣೆ: ಹೋಳಿ ಆಚರಣೆ ವೇಳೆ ಕಡಿಮೆ ನೀರು ಬಳಸಿ ಎಂದಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ

Published 28 ಮಾರ್ಚ್ 2024, 11:29 IST
Last Updated 28 ಮಾರ್ಚ್ 2024, 11:29 IST
ಅಕ್ಷರ ಗಾತ್ರ

ಥಾಣೆ: ಹೋಳಿ ಆಚರಣೆ ವೇಳೆ ನೀರು ಮಿತವಾಗಿ ಬಳಸಿ ಎಂದು ಹೇಳಿದ 27 ವರ್ಷದ ಮಹಿಳೆಗೆ ಥಳಿಸಿದ ಘಟನೆ ನವಿ ಮುಂಬೈಯ ತಳೋಜಾದ ವಸತಿ ಸಂಕೀರ್ಣವೊಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಳಿ ಆಚರಣೆ ವೇಳೆ ನೀರು ಕಡಿಮೆ ಬಳಕೆ ಮಾಡುವಂತೆ ಇತರರಿಗೆ ಹೇಳಿ ಎಂದು ಸಂಕೀರ್ಣದ ಕಾವಲುಗಾರನ ಬಳಿ ಸೋಮವಾರ ಮನವಿ ಮಾಡಿಕೊಂಡಿದ್ದರು. ಆದರೆ ಈ ಮನವಿ ವಾಗ್ವಾದಕ್ಕೆ ತಿರುಗಿದೆ. ಅಲ್ಲಿದ್ದ ಮಹಿಳೆ ಹಾಗೂ ಆಕೆಯ ಪುತ್ರ ಮನವಿ ಮಾಡಿದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ತಳೋಜಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 353, 504ರಡಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT