ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕಾಡಿನಲ್ಲಿ 50 ವರ್ಷದ ಮಹಿಳೆಯೊಬ್ಬರು ಕಾಲಿಗೆ ಕಬ್ಬಿಣ ಸರಪಳಿಯನ್ನು ಹಾಕಿ ಮರಕ್ಕೆ ಕಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಹಿಳೆಯ ಜೇಬಿನಲ್ಲಿ ಅಮೆರಿಕ ಪಾಸ್ಪೋರ್ಟ್, ತಮಿಳುನಾಡು ವಿಳಾಸವಿರುವ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳು ದೊರೆತಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

‘ಕುರಿಗಾಹಿಯೊಬ್ಬರು ಶನಿವಾರ ಸಂಜೆ ವೇಳೆ ಮಹಿಳೆಯೊಬ್ಬರು ಅಳುತ್ತಿರುವ ಸದ್ದು ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ಬಂಧಮುಕ್ತಗೊಳಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರ ಮಾನಸಿಕ ಆರೋಗ್ಯ ಮತ್ತು ದೇಹದ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಗೋವಾಕ್ಕೆ ಸ್ಥಳಾಂತರಿಸಿದ್ದಾರೆ. ಮಹಿಳೆ ಅಪಾಯದಿಂದ ಪಾರಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅವರ ಬಳಿ ಸಿಕ್ಕ ತಮಿಳುನಾಡಿನ ವಿಳಾಸವಿರುವ ಆಧಾರ್ ಕಾರ್ಡ್ ಮತ್ತು ಅಮೆರಿಕ ಪಾಸ್ಪೋರ್ಟ್ ಮೂಲಕ ಅವರ ಹೆಸರನ್ನು ಲಲಿತಾ ಕಾಯಿ ಎಂದು ಗುರುತಿಸಲಾಗಿದೆ. ಅವರ ವೀಸಾದ ಅವಧಿ ಮುಗಿದಿದೆ. ಸಿಕ್ಕ ದಾಖಲೆಗಳಿಂದ ಅವರು ಯಾವ ದೇಶದ ರಾಷ್ಟ್ರೀಯತೆ ಹೊಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ, ಪೊಲೀಸರು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ದಾಖಲೆಗಳ ಪ್ರಕಾರ ಅವರು ಕಳೆದ 10 ವರ್ಷಗಳಿಂದ ಭಾರತದಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆದರೆ ಮಹಿಳೆಯ ನಿಜವಾದ ಮೂಲದ ಬಗ್ಗೆ ತನಿಖೆಯ ಬಳಿಕ ತಿಳಿದುಬರಬೇಕಿದೆ’ ಎಂದು ಹೇಳಿದ್ದಾರೆ.

‘ಮಹಿಳೆ ಯಾವುದೇ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ, ಅಲ್ಲದೆ ಎಷ್ಟು ದಿನಗಳಿಂದ ಕಾಡಿನಲ್ಲಿ ಸಿಲುಕಿದ್ದರು ಎನ್ನುವುದೂ ಗೊತ್ತಿಲ್ಲ. ಆಕೆಯ ಸಂಬಂಧಿಕರನ್ನು ಹುಡುಕಲಾಗುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.