ವಾರಾಣಸಿ: ವಾರಾಣಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಎರಡು ಹಳೆಯ ಮನೆಗಳು ಮಂಗಳವಾರ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
‘ಮಂಗಳವಾರ ಮುಂಜಾನೆ ಅವಘಡ ಸಂಭವಿಸಿದ್ದು, ಗುಪ್ತಾ ಎಂಬವರಿಗೆ ಸೇರಿದ ಮನೆಯಲ್ಲಿ 9 ಮಂದಿ ಇದ್ದರು. ಯಾದವ್ ಎಂಬವರಿಗೆ ಸೇರಿದ ಮನೆಯಲ್ಲಿ 7 ಜನರಿದ್ದರು. ಅವರಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಹಿಳಾ ಕಾನ್‌ಸ್ಟೆಬಲ್‌ಗೂ ಗಾಯವಾಗಿದೆ. ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ಪೂರ್ಣವಾಗಿದ್ದು, ಅವಶೇಷಗಳನ್ನು ತೆರವುಗೊಳಿಸವ ಕಾರ್ಯ ನಡೆಯುತ್ತಿದೆ‘ ಎಂದು ಮಾಹಿತಿ ನೀಡಿದ್ದಾರೆ.
‘70 ವರ್ಷಕ್ಕೂ ಹಳೆಯದಾದ ಕಟ್ಟಡಗಳ ಎರಡು ಮತ್ತು ಮೂರನೇ ಅಂತಸ್ತು ಕುಸಿದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.