ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ವಿರುದ್ಧ 5ರಂದು ದೆಹಲಿಗೆ ಪಾದಯಾತ್ರೆ

ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ವಿರುದ್ಧ ವಿವಿಧ ಸಂಘಟನೆಗಳ ಆಕ್ರೋಶ
Last Updated 12 ಮಾರ್ಚ್ 2023, 10:57 IST
ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನತೆ ತತ್ತರಿಸುವಾಗ ನರೇಂದ್ರ ಮೋದಿ ಸರ್ಕಾರ ಅದಾನಿ ಮತ್ತು ಅಂಬಾನಿಯಂತಹವರಿಗೆ ಅಮೃತ್ ಕಾಲ ಖಾತರಿಪಡಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರು, ರೈತರು ಮತ್ತು ಕೃಷಿ ಕಾರ್ಮಿಕರು ಜಂಟಿಯಾಗಿ ಏ. 5 ರಂದು ದೆಹಲಿಗೆ ಮೆರವಣಿಗೆ ನಡೆಸಲಿದ್ದಾರೆ.

ಸಿಐಟಿಯು, ಅಖಿಲ ಭಾರತ ಕಿಸಾನ್ ಸಭಾ ಮತ್ತು ಅಖಿಲ ಭಾರತ ಕೃಷಿ ಕಾರ್ಮಿಕರ ಒಕ್ಕೂಟ ಆಯೋಜಿಸಿರುವ ‘ಮಜ್ದೂರ್ ಕಿಸಾನ್ ಸಂಘರ್ಷ್ ರ್‍ಯಾಲಿ’ಯಲ್ಲಿ ಸಾವಿರಾರು ಜನರು ಭಾಗವಹಿಸುವ ಸಾಧ್ಯತೆಯಿದೆ.

ಕನಿಷ್ಠ ವೇತನ ತಿಂಗಳಿಗೆ ₹26,000, ಎಲ್ಲಾ ಕಾರ್ಮಿಕರಿಗೆ₹ 10,000 ಪಿಂಚಣಿ ಖಾತರಿಪಡಿಸುವುದು, ಅಗ್ನಿಪಥ್ ಯೋಜನೆ ರದ್ದುಗೊಳಿಸುವುದು, ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಪಡಿಸುವುದು ಮತ್ತು ಬಡ, ಮಧ್ಯಮ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಒಂದು ಬಾರಿಯ ಸಾಲ ಮನ್ನಾ ಸೇರಿದಂತೆ 13 ಅಂಶಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗಿದೆ.

ವಿದ್ಯುತ್ ತಿದ್ದುಪಡಿ ಮಸೂದೆ–2022 ರದ್ದುಗೊಳಿಸಬೇಕು, ನರೇಗಾ ಕೆಲಸದ ದಿನಗಳನ್ನು ದಿನಕ್ಕೆ ₹600 ಕನಿಷ್ಠ ವೇತನದೊಂದಿಗೆ 200 ದಿನಕ್ಕೆ ವಿಸ್ತರಿಸಬೇಕು, ನಗರ ಉದ್ಯೋಗ ಖಾತರಿ ಯೋಜನೆ ಜಾರಿಗೆ ತರಬೇಕು, ಸಾರ್ವಜನಿಕ ವಲಯದ ಘಟಕಗಳು ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ನಿಲ್ಲಿಸಬೇಕು ಮತ್ತು ಇಂಧನದ ಮೇಲಿನ ಕೇಂದ್ರ ಅಬಕಾರಿ ತೆರಿಗೆ ಕಡಿಮೆ ಮಾಡಬೇಕು, ಅತಿ ಶ್ರೀಮಂತರಿಗೆ ತೆರಿಗೆ ವಿಧಿಸಬೇಕು, ಸಂಪತ್ತಿನ ತೆರಿಗೆ ಪರಿಚಯಿಸಬೇಕು ಮತ್ತು ಕಾರ್ಪೊರೇಟ್ ತೆರಿಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿಗಳಾದ ತಪನ್ ಸೇನ್ (ಸಿಐಟಿಯು), ವಿಜೂ ಕೃಷ್ಣನ್ (ಕಿಸಾನ್ ಸಭಾ) ಮತ್ತು ಬಿ ವೆಂಕಟ್ (ಎಐಎಡಬ್ಲ್ಯುಯು) ಪ್ರಕಾರ, ಮೋದಿ ಸರ್ಕಾರ ‘ಕಾರ್ಮಿಕರು ಮತ್ತು ರೈತರನ್ನು ಶೋಷಿಸುವ ಮತ್ತು ಲೂಟಿ ಮಾಡುವ ಮೂಲಕ ಅದಾನಿ ಮತ್ತು ಅಂಬಾನಿಯಂತಹ ಸಹವರ್ತಿಗಳಿಗೆ ‘ಅಮೃತ್ ಕಾಲ’ ಖಚಿತಪಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಆರೋಪಿಸಿದರು.

‘ಮೂರು ಕರಾಳ ಕೃಷಿ ಕಾನೂನುಗಳ’ ವಿರುದ್ಧದ ಐತಿಹಾಸಿಕ ಆಂದೋಲನದ ಸಮಯದಲ್ಲಿ ಖಾತರಿಪಡಿಸಿದ ಲಾಭದಾಯಕ ಬೆಲೆ ಸೇರಿದಂತೆ ರೈತ ಸಂಘಟನೆಗಳಿಗೆ ಲಿಖಿತ ಒಪ್ಪಂದವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT