ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಂಸತ್‌ ಭವನದ ಬಗ್ಗೆ ಜೈರಾಮ್‌ ರಮೇಶ್‌ ಟೀಕೆ: ಪ್ರಲ್ಹಾದ ಜೋಶಿ ತಿರುಗೇಟು

Published 25 ಸೆಪ್ಟೆಂಬರ್ 2023, 5:18 IST
Last Updated 25 ಸೆಪ್ಟೆಂಬರ್ 2023, 5:18 IST
ಅಕ್ಷರ ಗಾತ್ರ

ನವದೆಹಲಿ: ನೂತನ ಸಂಸತ್‌ ಭವನವನ್ನು ಟೀಕಿಸುವ ಮೂಲಕ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ದೇಶದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.

‘ಜೈರಾಮ್‌ ರಮೇಶ್‌ ಅವರೇ, ನಿಮ್ಮ ಪಕ್ಷದ (ಕಾಂಗ್ರೆಸ್) ಚೇಷ್ಟೆಗಳು ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ನಾವು ನಮ್ಮದೇ ಆದ ಪ್ರಜಾಪ್ರಭುತ್ವದ ಮಂದಿರವನ್ನು ನಿರ್ಮಿಸಿರುವುದು ನಿಮಗೆ ಇಷ್ಟವಿಲ್ಲ. ನಿಮ್ಮ ಪಕ್ಷವು ವಿಶ್ವ ದರ್ಜೆಯ ವಾಸ್ತುಶಿಲ್ಪವನ್ನು ನೋಡುತ್ತಿದೆ ಮತ್ತು ಇದು ನಿಮ್ಮ ಆಡಳಿತದ ಎಲ್ಲಾ ದಶಕಗಳಲ್ಲಿ ನಿಮ್ಮ ಪಕ್ಷವು ಭಾರತಕ್ಕಾಗಿ ಏನನ್ನೂ ಮಾಡಿಲ್ಲ ಎಂಬುವುದನ್ನು ನೆನಪಿಸುತ್ತದೆ’ ಎಂದು ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ನೂತನ ಸಂಸತ್‌ ಭವನದ ವಾಸ್ತುಶಿಲ್ಪ ಪ್ರಜಾಪ್ರಭುತ್ವ ಮತ್ತು ಸಂಭಾಷಣೆಗಳನ್ನು ಕೊಂದು ಹಾಕಿದೆ. ಈ ಕಟ್ಟಡವನ್ನು ‘ಮೋದಿ ಮಲ್ಟಿಪ್ಲೆಕ್ಸ್‌ ಅಥವಾ ಮೋದಿ ಮ್ಯಾರಿಯೆಟ್‌’ ಎಂದು ಕರೆಯಬೇಕೆಂದು ಜೈರಾಮ್‌ ರಮೇಶ್‌ ವ್ಯಂಗ್ಯವಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಜೋಶಿ, ವಿರೋಧ ಪಕ್ಷವು ತನ್ನ ಹತಾಶೆಯನ್ನು ಈ ರೀತಿ ಹೊರಹಾಕುವ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿ‌ದ್ದಾರೆ.

‘ನೀವು ಅಧಿಕಾರದಲ್ಲಿದ್ದಾಗ ಮತ್ತು ಈಗ ಪ್ರತಿಪಕ್ಷವಾಗಿ ಏನೂ ಮಾಡಿದ್ದೀರಿ, ನಾವು ಜಗತ್ತು ನೋಡಿ ಮೆಚ್ಚುವಂತಹ ಕೆಲಸ ಮಾಡಿದ್ದೇವೆ. ನೀವು ನಿಮ್ಮ ಹತಾಶೆಯನ್ನು ಈ ರೀತಿ ಹೊರಹಾಕಬಾರದು, ಅದರ ಬದಲು ಸಾರ್ವಜನಿಕರು ನಿಮ್ಮನ್ನು ಮತ್ತು ನಿಮ್ಮ ಕ್ಷುಲ್ಲಕ ರಾಜಕೀಯವನ್ನು ಏಕೆ ತಿರಸ್ಕರಿಸುತ್ತಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಜೋಶಿ ಟೀಕಿಸಿದ್ದಾರೆ.

‘ಜೈರಾಮ್‌ ರಮೇಶ್‌ ಅವರು ಸಂಸತ್ತಿನ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ದೇಶದ ಜನರನ್ನು ಅವಮಾನಿಸುತ್ತಿದ್ದಾರೆ. ನವ ಭಾರತದ ಆಕಾಂಕ್ಷೆಗಳಿಗೆ ಸೂಕ್ತವಾದ, ಸಂಕೇತವಾಗಿರುವ ಹೊಸ ಸಂಸತ್ತಿನ ಕಟ್ಟಡವು ವಿರೋಧ ಪಕ್ಷಗಳಿಗೆ ಕಣ್ಣುನೋವು ತರಿಸುತ್ತಿರುವುದೇಕೆ, ಆತ್ಮನಿರ್ಭರ ಭಾರತದ ಯಶಸ್ಸು ಈ ಜನರಿಗೆ ಏಕೆ ತೊಂದರೆ ಕೊಡುತ್ತಿದೆ’ ಎಂದು ಜೋಶಿ ಪ್ರಶ್ನಿಸಿದ್ದಾರೆ

ಸಂಸತ್‌ ಭವನವು ಹಳೆಯದಾಗಿರುವ ಕಾರಣ ಹೊಸ ಸಂಸತ್ತಿನ ಕಟ್ಟಡದ ಅಗತ್ಯವಿದೆ ಎಂದು ರಮೇಶ್‌ ಸ್ವತಃ ಒಮ್ಮೆ ಹೇಳಿದ್ದರು. ಹೊಸ ಸಂಸತ್ತಿನ ಕಟ್ಟಡದ ಅಗತ್ಯತೆಯ ಬಗ್ಗೆ ಈ ಹಿಂದೆಯೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ, ಕೆಲವರು ಏಕೆ ಪ್ರತಿ ವಿಷಯವನ್ನು ರಾಜಕೀಯಗೊಳಿಸಲು ಆಯ್ಕೆ ಮಾಡುತ್ತಾರೆ ಎಂದು ಜೋಶಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT