ನವದೆಹಲಿ:  ಭಾರತೀಯ ಅಂಚೆ ಇಲಾಖೆಯು ‘ಎಕ್ಸ್‌ಪ್ರೆಸ್ ಪಾರ್ಸೆಲ್’ ಮತ್ತು ‘ಬ್ಯುಸಿನೆಸ್ ಪಾರ್ಸೆಲ್’ ಎಂಬ ಎರಡು ಸರಕು ಸಾಗಣೆ ಸೇವೆಗಳನ್ನು ಸೋಮವಾರ ಆರಂಭಿಸಿದೆ. ಈ ಸೇವೆಗಳ ಅಡಿಯಲ್ಲಿ ಇಲಾಖೆಯು ಕನಿಷ್ಠ ₨7,500ಗಳಿಂದ 50,000 ಮೌಲ್ಯದ ಸರಕುಗಳನ್ನು ಉಚಿತವಾಗಿ ಸಂಗ್ರಹಿಸಿಕೊಂಡು ಸಾಗಣೆ ಸೇವೆ ಒದಗಿಸಲಿದೆ.

ಎಕ್ಸ್‌ಪ್ರೆಸ್ ಪಾರ್ಸೆಲ್ ಸೇವೆಯ ಅಡಿಯಲ್ಲಿ ಬರುವ ಸರಕುಗಳನ್ನು ಅಂಚೆ ಇಲಾಖೆಯು ವಿಮಾನಗಳ ಮೂಲಕ ಸಾಗಿಸಲಿದೆ. ಬ್ಯುಸಿನೆಸ್ ಪಾರ್ಸೆಲ್ ಸೇವೆಯನ್ನು ರಸ್ತೆ ಸಾರಿಗೆ ಮೂಲಕ ಇಲಾಖೆ ಒದಗಿಸಲಿದೆ ಎಂದು ಅಂಚೆ ಇಲಾಖೆ ಕಾರ್ಯದರ್ಶಿ ಪಿ. ಗೋಪಿನಾಥ್ ಸುದ್ದಿಗಾರರಿಗೆ ತಿಳಿಸಿದರು.

ಎರಡೂ ಸೇವೆಗಳ ಅಡಿಯಲ್ಲಿ ಗ್ರಾಹಕರ ಸರಕುಗಳನ್ನು ಕನಿಷ್ಠ 72 ಗಂಟೆಗಳಲ್ಲಿ (ಮೂರು ದಿನ) ನಿಗದಿತ ಸ್ಥಳಕ್ಕೆ ತಲುಪಿಸಲಾಗುವುದು ಎಂದೂ ಅವರು ಹೇಳಿದರು. ಇಲಾಖೆಯು ಬ್ಯುಸಿನೆಸ್ ಪಾರ್ಸೆಲ್ ಸೇವೆಯನ್ನು ದೇಶದಾದ್ಯಂತ ನೀಡಲಿದೆ. ಆದರೆ, ಎಕ್ಸ್‌ಪ್ರೆಸ್ ಪಾರ್ಸೆಲ್ ಸೇವೆಯನ್ನು ಸದ್ಯ ಬೆಂಗಳೂರು, ದೆಹಲಿ, ಚೆನ್ನೈ, ಮುಂಬೈ, ತಿರುವನಂತಪುರ, ಕೋಲ್ಕತ್ತ, ಆಗ್ರಾ, ಭುವನೇಶ್ವರ, ಹೈದರಾಬಾದ್, ಪುಣೆ, ಲಖನೌ, ಜೈಪುರ ಸೇರಿದಂತೆ 20 ನಗರಗಳಲ್ಲಿ ಮಾತ್ರ ಒದಗಿಸಲಿದೆ. 2014ರ ಅಂತ್ಯದ ವೇಳೆಗೆ ದೇಶದ ಎಲ್ಲಾ ಭಾಗಕ್ಕೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದೂ ಗೋಪಿನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.