ಮುಂಬೈ (ಪಿಟಿಐ): ಮಧ್ಯ ಮುಂಬೈನಲ್ಲಿ ಸೋಮವಾರ ಕಟ್ಟಡ ಕುಸಿದು ಬಿದ್ದು ಸಂಭವಿಸಿದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಕ್ಕೆ ಏರಿದೆ.

ಮಂಗಳವಾರ ಇನ್ನಷ್ಟು ಮೃತದೇಹಗಳನ್ನು ಹೊರೆತೆಗೆಯಲಾಗಿದೆ. ಗಾಯಗೊಂಡಿರುವ ಆರು ಜನರನ್ನು ಬಾಂದ್ರಾ ಉಪನಗರದ ಬಾಭಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

`ಮಾಹಿಮ್ ದರ್ಗಾ ಬಳಿಯಿರುವ ನಾಲ್ಕು ಅಂತಸ್ತಿನ ಕಟ್ಟಡ ಸೋಮವಾರ ರಾತ್ರಿ ಕುಸಿದು ಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ. ಅನೇಕ ಜನ ಕಟ್ಟಡದ ಅವಶೇಷಗಳ ಅಡಿ ಸಿಲುಕಿಕೊಂಡಿದ್ದರು. ಮಂಗಳವಾರ ಆರು ಜನರ ಶವಗಳನ್ನು ಹೊರತೆಗೆಯಲಾಗಿದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ ಶೋ ರೂಮ್ಗಾಗಿ ಕಟ್ಟಡದ ನೆಲ ಅಂತಸ್ತಿನ ವಿನ್ಯಾಸ ಬದಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.