ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಹೆಸರಿಸಿದ್ದ ಡಿಎಂಕೆ ಸಂಸದೆ ಕನಿಮೊಳಿ ಮತ್ತು ಇತರ ನಾಲ್ವರಿಗೆ ಜಾರಿ ನಿರ್ದೇಶನಾಲಯವು ಅಕ್ರಮ ಲೇವಾದೇವಿ ತಡೆ ಕಾಯಿದೆಯಡಿ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

ಕನಿಮೊಳಿ ಅವರಲ್ಲದೆ ಕಲೈಂಞ್ಞರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರದ್ ಕುಮಾರ್, ಸ್ವಾನ್ ಟೆಲಿಕಾಂ ಪ್ರಮೋಟರ್ ಶಾಹಿದ್ ಬಲ್ಮಾ ಅವರ ಸೋದರ ಸಂಬಂಧಿ ಆಸಿಫ್ ಬಲ್ವಾ, ಕುಸೆಗಾಂವ್ ಹಣ್ಣು ಮತ್ತು ತರಕಾರಿಗಳ ಸಂಸ್ಥೆಯ ರಾಜೀವ್ ಅಗರ್ವಾಲ್ ಮತ್ತು ಸಿನಿಯುಗ್ ಫಿಲ್ಮಂಸ್ ಲಿಮಿಟೆಡ್ನ ಕರೀಂ ಮುರಾನಿ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ತಮ್ಮ ಹಣ ಹೂಡಿಕೆ, ಆದಾಯ ಮತ್ತು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಕೂಡ ಜಾರಿ ನಿರ್ದೇಶನಾಲಯವು ಎಂದೂ ಮೂಲಗಳು ತಿಳಿಸಿವೆ.ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಮತ್ತು ದೂರಸಂಪರ್ಕ ಖಾತೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೇಹುರಾ ಮತ್ತು ಮೂರು ಟೆಲಿಕಾಂ ಕಂಪೆನಿಗಳು ಸೇರಿದಂತೆ ಎಂಟು ಮಂದಿಯನ್ನು 2ಜಿ ತರಂಗಾಂತರ ಹಗರಣದಲ್ಲಿ ಸಿಬಿಐ ಏ. 2ರಂದು ಸಲ್ಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ ಹೆಸರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.