ನವದೆಹಲಿ (ಐಎಎನ್ಎಸ್): ಎರಡು ವರ್ಷಗಳ ಹಿಂದೆ ಎಂ.ಚಿನ್ನಸ್ವಾಮಿ ಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕಾರಾಗೃಹದಲ್ಲಿರುವ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಇಬ್ಬರು ಶಂಕಿತ ಉಗ್ರರನ್ನು ತನ್ನ ಎದುರು ಹಾಜರುಪಡಿಸುವಂತೆ ದೆಹಲಿಯ ನ್ಯಾಯಾಲಯ ಸೋಮವಾರ ಕರ್ನಾಟಕ ಪೊಲೀಸರಿಗೆ ಆದೇಶಿಸಿದೆ.

ಇಂಡಿಯನ್ ಮುಜಾಹಿದ್ದೀನ್ ಶಂಕಿತ ಉಗ್ರರಾದ ಕಫಿಲ್ ಅಖ್ತರ್ ಮತ್ತು ಕಮಲ್ ಹಸನ್ ಅವರನ್ನು ಜುಲೈ 11ರ ಒಳಗಾಗಿ ತನ್ನ ಎದುರು ಹಾಜರುಪಡಿಸುವಂತೆ ನ್ಯಾಯಾಧೀಶ ವಿನೋದ್ ಯಾದವ್ ಬೆಂಗಳೂರು ಪೊಲೀಸರಿಗೆ ವಾರೆಂಟ್ ಹೊರಡಿಸಿದ್ದಾರೆ.

ಏಪ್ರಿಲ್ನಲ್ಲಿ ಕೋಲ್ಕತ್ತದಲ್ಲಿ ಹಸನ್ ಮತ್ತು ಕಳೆದ ತಿಂಗಳು ಬಿಹಾರದ ದರ್ಬಾಂಗನಲ್ಲಿ ಅಖ್ತರ್ನನ್ನು ಪೊಲೀಸರು ಬಂಧಿಸಿದ್ದರು. 2010ರಲ್ಲಿ ಜಾಮೀಯಾ ಮಸೀದಿ ಬಳಿ ನಡೆದ ಗುಂಡಿನ ದಾಳಿ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಬಾಂಬ್ ಸ್ಫೋಟ, ಗುಂಡಿನ ದಾಳಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಇಬ್ಬರನ್ನೂ ತಮ್ಮ ವಶಕ್ಕೆ ಒಪ್ಪಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.