ಗೋಲಾಘಾಟ್/ಅಸ್ಸಾಂ (ಪಿಟಿಐ): ಭಾರಿ ಪ್ರವಾಹದಿಂದಾಗಿ ಇಲ್ಲಿನ ಕಾಜಿರಂಗ ರಾಷ್ಟ್ರೀಯ ಉದ್ಯಾನದ ಶೇ 80ರಷ್ಟು ಭಾಗ ಜಲಾವೃತಗೊಂಡಿದ್ದು, ಘೇಂಡಾಮೃಗ ಸೇರಿದಂತೆ ನೂರಾರು ಪ್ರಾಣಿಗಳು ಮೃತಪಟ್ಟಿವೆ.

13 ಘೇಂಡಾಮೃಗಗಳು, 475 ಜಿಂಕೆಗಳು, 29 ಹೆಬ್ಬಾವುಗಳು, 5 ಮುಳ್ಳುಹಂದಿಗಳು, ಹದಿನಾರು ಬಾರಸಿಂಗ ಕಾಡೆಮ್ಮೆಗಳು ಮತ್ತು ನೆಲಕರಡಿಗಳು ಪ್ರವಾಹದ ರಭಸಕ್ಕೆ ಸಿಲುಕಿ ಸತ್ತಿವೆ. ಪ್ರಾಣಿಗಳ ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಈಗಾಗಲೇ ಪಾರ್ಕ್ ಅಂಗಳದಿಂದ ನಿತ್ಯವೂ ಪ್ರಾಣಿಗಳ ಶವಗಳನ್ನು ನಿತ್ಯ ಹೊರಸಾಗಿಸುವ ಕೆಲಸ ನಡೆಯುತ್ತಿದೆ ಎಂದು ಪಾರ್ಕ್ನ ನಿರ್ದೇಶಕ ಸಂಜೀವ್ ಬೋರಾ ತಿಳಿಸಿದ್ದಾರೆ.

ಉದ್ಯಾನದ ನಡುವಿನ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ 25ಕ್ಕೂ ಹೆಚ್ಚು ಬಾರಸಿಂಗ, ಎರಡು ಘೇಂಡಾಮೃಗಗಳು ಸಾವನ್ನಪ್ಪಿವೆ. ಉದ್ಯಾನವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ವೇಗವಾಗಿ ವಾಹನ ಓಡಿಸುವುದಕ್ಕೆ ಕಡಿವಾಣ ಹಾಕಲು ಗೊಲಾಘಾಟ್ ಜಿಲ್ಲಾಡಳಿತ ಹೆದ್ದಾರಿಗಳಲ್ಲಿ ಬ್ಯಾರಿಕೇಡ್ ನಿರ್ಮಿಸುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜೀವ್ ಗೊಹೈನ್ ಬೆಹರಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.