ಹೈದರಾಬಾದ್ (ಪಿಟಿಐ): ಅಣ್ಣಾ ಹಜಾರೆ ಅವರನ್ನು ಗಾಂಧೀಜಿ ತತ್ವಗಳ ಚೌಕಟ್ಟಿನಲ್ಲಿಟ್ಟು ಪರಾಮರ್ಶಿಸುವುದು ಸರಿಯಲ್ಲ ಎಂದು ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಭವನದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, `ಅಣ್ಣಾ ಹಜಾರೆ ಇವತ್ತು ತಾವು ನಡೆಸುತ್ತಿರುವ ಚಳವಳಿಯನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದಕ್ಕೆ ಗಾಂಧೀಜಿ ತತ್ವಗಳ ಲೇಪನ ಸೂಕ್ತವಲ್ಲ. ಆದಾಗ್ಯೂ ಅವರ ಚಳವಳಿ ದೇಶದಲ್ಲಿನ ಭ್ರಷ್ಟಾಚಾರವನ್ನು ಕೊನೆಯಾಗಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬುದು ತಮಗೆ ಅನುಮಾನದ ಸಂಗತಿ~ ಎಂದು ಹೇಳಿದರು.

`ಕೇವಲ ಕಾನೂನು ರೂಪಿಸಿದ ಮಾತ್ರಕ್ಕೆ ದೇಶದಲ್ಲಿನ ಭ್ರಷ್ಟಾಚಾರ ಕೊನೆಯಾಗುವುದಿಲ್ಲ~ ಎಂದ ಅವರು, `ಎಲ್ಲಿಯತನಕ ನಾವು ಲಂಚವನ್ನು ಕೊಡುವುದಿಲ್ಲ ಮತ್ತು ಪಡೆಯುವುದಿಲ್ಲ ಎಂದು ತೀರ್ಮಾನ ಮಾಡುತ್ತೇವೆಯೊ ಅಲ್ಲಿಯವರೆವಿಗೂ ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಲೇ ಇರುತ್ತದೆ~ ಎಂದು ತಿಳಿಸಿದರು.

`ಪ್ರಪಂಚ ಬದಲಾಗಬೇಕು ಎಂದು ಬಯಸುವ ಪ್ರತಿಯೊಬ್ಬರೂ ಮೊದಲು ಸ್ವಯಂ ಬದಲಾವಣೆಗೆ ಒಳಪಡಬೇಕು ಎಂಬ ಬಾಪೂಜಿಯವರ ಆಶಯ ಇಂದು ಹೆಚ್ಚು ಪ್ರಸ್ತುತವಾಗಿದೆ. ನಾವೆಲ್ಲ ಇವತ್ತು ನೈತಿಕವಾಗಿ ಎಷ್ಟು ಭ್ರಷ್ಟರಾಗಿದ್ದೇವೆ ಎಂಬುದರತ್ತ ಹಜಾರೆ ಕನ್ನಡಿ ಹಿಡಿಯುವ ಅವಶ್ಯಕತೆ ಇದೆ~ ಎಂದು ತುಷಾರ ಗಾಂಧಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.