ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜ್‌ಪಾಲ್‌ಗೆ ನ್ಯಾಯಾಂಗ ಬಂಧನ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಣಜಿ (ಪಿಟಿಐ): ಸಹೋ­ದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತ­ರಾಗಿರುವ ‘ತೆಹೆಲ್ಕಾ’ ನಿಯತ­ಕಾಲಿಕೆಯ ಸಂಸ್ಥಾಪಕ ಸಂಪಾದಕ ತರುಣ್ ತೇಜ್‌ಪಾಲ್ ಅವ­ರನ್ನು 12 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಗೋವಾ ಕೋರ್ಟ್ ಆದೇಶ ಹೊರ­ಡಿಸಿದೆ.

ತೇಜ್‌ಪಾಲ್ ಅವರ ಹತ್ತು ದಿನಗಳ ಪೊಲೀಸ್ ಕಸ್ಟಡಿ ಬುಧವಾರ ಕೊನೆ­ಗೊಂಡ ಹಿನ್ನೆಲೆಯಲ್ಲಿ, ಪ್ರಥಮ ದರ್ಜೆ ನ್ಯಾಯಾಧೀಶರಾದ ಮ್ಯಾಜಿಸ್ಟ್ರೇಟ್ ಕ್ಷಮಾ ಜೋಶಿ, ತೇಜ್‌ಪಾಲ್ ಅವರನ್ನು 12 ­ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದರು.

ಸದ್ಯ ಪಣಜಿ ಪೊಲೀಸರ ವಶ­ದಲ್ಲಿರುವ ತೇಜ್‌ಪಾಲ್‌ ಅವರನ್ನು ವಾಸ್ಕೊದಲ್ಲಿರುವ ಸಾದಾ ಉಪ ಕಾರಾ­ಗೃಹಕ್ಕೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೇಜ್‌ಪಾಲ್ ಅವರನ್ನು ಗೋವಾ ಪೊಲೀಸರು ನವೆಂಬರ್ 30ರಂದು ಬಂಧಿಸಿದ್ದರು.

ತೇಜ್‌ಪಾಲ್ ವಿರುದ್ಧ ಭಾರತೀಯ ದಂಡಸಂಹಿತೆ (ಐಪಿಸಿ)376 (ಅತ್ಯಾಚಾರ)­, 376 (2) (ಅಧಿಕಾರ ದುರ್ಬಳಕೆ ಮಾಡಿಕೊಂಡು ತನ್ನ ಅಧೀನ ಸಹೋದ್ಯೋಗಿ ಮೇಲೆ ಅತ್ಯಾಚಾರ) ಸೇರಿ­ದಂತೆ ಹಲವು ಕಲಂಗಳಡಿ
ಪೊಲೀ­ಸರು ಪ್ರಕರಣ ದಾಖ­ಲಿಸಿ­ಕೊಂಡಿ­­ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT