ಇಸ್ಲಾಮಾಬಾದ್ (ಪಿಟಿಐ): ಪ್ರಕ್ಷುಬ್ಧ ಖೈಬರ್ ಗುಡ್ಡಗಾಡು ಪ್ರದೇಶದ ನಿವಾಸಿ, ಕಂಪ್ಯೂಟರ್ ತಜ್ಞ ಫರ್ಮಾನ್ ಅಲಿ ಶಿನ್ವಾರಿಯನ್ನು ಅಲ್-ಖೈದಾ ಸಂಘಟನೆಯು ಪಾಕಿಸ್ತಾನದಲ್ಲಿ ಅಲ್ ಖೈದಾ ಮುಖ್ಯಸ್ಥನಾಗಿ ನೇಮಕ ಮಾಡಿದೆ. ಶಿನ್ವಾರಿಯ ಇಬ್ಬರು ಸಹೋದರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳಲ್ಲಿ ಭಾಗಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿನ್ವಾರಿಯನ್ನು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಜಾಲದ ಮುಖ್ಯಸ್ಥನಾಗಿ ನೇಮಕ ಮಾಡಲಾಗಿದೆ ಎಂಬುದಾಗಿ ಅಲ್ - ಖೈದಾ ನಾಯಕತ್ವ ಬಿಡುಗಡೆ ಮಾಡಿರುವ ಹೇಳಿಕೆಯೊಂದು ತಿಳಿಸಿದೆ ಎಂಬುದಾಗಿ ತನ್ನ ಮೂಲಗಳನ್ನು ಉಲ್ಲೇಖಿಸಿ ನ್ಯೂಸ್ ಡೈಲಿ ಸೋಮವಾರ ವರದಿ ಮಾಡಿದೆ.

ಹೆಸರು ತಿಳಿಸಲು ಇಚ್ಛಿಸದ ಸ್ಥಳೀಯ ಅಧಿಕಾರಿಗಳು ಈ ಬೆಳವಣಿಗೆಯನ್ನು ದೃಢ ಪಡಿಸಿದ್ದಾರೆ ಎಂದೂ ವರದಿ ಹೇಳಿದೆ.

ಅಲ್ -ಖೈದಾ ಉನ್ನತ ನಾಯಕತ್ವದ ಅನುಮೋದನೆಯ ಬಳಿಕ 30ರ ಹರೆಯದ ಶಿನ್ವಾರಿಯನ್ನು ಪಾಕಿಸ್ತಾನದಲ್ಲಿನ ಜಾಲದ ಮುಖ್ಯಸ್ಥನನ್ನಾಗಿ ಮಾಡಲಾಗಿದೆ ಎಂದು ಅಲ್ - ಖೈದಾ ಸಂಘಟನೆಯ ದವಾ ದಳವು ಬಿಡುಗಡೆ ಮಾಡಿರುವ ಹೇಳಿಕೆಯು ತಿಳಿಸಿದೆ.

ಪಾಕಿಸ್ತಾನದ ಗುಡ್ಡಗಾಡು ಪ್ರದೇಶದ ಕುರಿತ ಶಿನ್ವಾರಿಯ ತಿಳುವಳಿಕೆ ಮತ್ತು ಅಲ್- ಖೈದಾ ಸಂಘಟನೆಯ ಹತ ಕಮಾಂಡರ್ ಬದ್ರ ಮನ್ಸೂರ್ ಜೊತೆಗಿನ ನಿಕಟ ಒಡನಾಟದ ಹಿನ್ನೆಲೆಯಲ್ಲಿ ಆತನನ್ನು ಈ ಹುದ್ದೆಗೆ ನೇಮಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಬದ್ರ್ ಮನ್ಸೂರ್ ಮತ್ತು ಒಸಾಮಾ ಬಿನ್ ಲಾಡೆನ್ ನಂತಹ ನಾಯಕರು ಇಸ್ಲಾಮ್ ಸಲುವಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿರುವ ಹೇಳಿಕೆ ಶಿನ್ವಾರಿ ನೇಮಕಾತಿಯ ನಿರ್ಣಯದಲ್ಲಿ ಪಾಕಿಸ್ತಾನದಲ್ಲಿನ ಅಲ್ - ಖೈದಾ ಕಮಾಂಡರ್ ಗಳು ಪಾಲುದಾರರರಾಗಿಲ್ಲ. ಅವರು ನಿರ್ಧಾರದ ಅನುಮೋದನೆಯನ್ನಷ್ಟೇ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿಸುತ್ತಾ ಹೇಳಿಕೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.