ಢಾಕಾ(ಐಎಎನ್‌ಎಸ್, ಪಿಟಿಐ): ಬಾಂಗ್ಲಾ ದೇಶದಲ್ಲಿ ಆಡಳಿತಾರೂಢ ಅವಾಮಿ ಲೀಗ್ ಪಕ್ಷ, ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದಲ್ಲಿ ಸಂಸತ್ ಚುನಾವಣೆಯಲ್ಲಿ 147 ಕ್ಷೇತ್ರಗಳ ಪೈಕಿ 104ರಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದಿದೆ. ಇದರ ಬೆನ್ನಲ್ಲೇ ನಗರದ ಹೊರ ವಲಯದಲ್ಲಿ ಸೋಮವಾರ ಸಂಭವಿರುವ ಹಿಂಸಾಚಾರದಲ್ಲಿ ಮತ್ತೆ ನಾಲ್ವರು ಬಲಿಯಾಗಿದ್ದಾರೆ.

ನಗರದ ಹೊರ ವಲಯದಲ್ಲಿ ನಡೆದ ಹಿಂಸಾಚಾರದಲ್ಲಿ ಆಡಳಿತಾರೂಢ ಪಕ್ಷ ಅವಾಮಿ ಲೀಗ್‌ನ ಮೂವರು ಬೆಂಬಲಿಗರು ಸೇರಿದಂತೆ ನಾಲ್ವರು ಕೊಲೆಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ.

ಎರಡು ಗುಂಪುಗಳ ಸದಸ್ಯರು ಪರಸ್ಪರ ಕಟ್ಟಿಗೆ, ಬಡಿಗೆಗಳನ್ನು ಹಿಡಿದು ಗಲಾಟೆ ನಡೆಸಿದ್ದಾರೆ. ಇದರೊಂದಿಗೆ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 25ಕ್ಕೇರಿದೆ.

ಸಂಸತ್‌ನ 10ನೇ ಸಾರ್ವತ್ರಿಕ ಚುನಾವಣೆಯಲ್ಲಿ 147 ಸ್ಥಾನಗಳಲ್ಲಿ 139 ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಮತದಾನದ ವೇಳೆ ಮತಗಟ್ಟೆ ಬಳಿ ನಡೆದ ಗಲಾಟೆ, ಹಿಂಸಾಚಾರದ ಹಿನ್ನೆಲೆಯಲ್ಲಿ ಮರು ಮತದಾನ ನಡೆಯಬೇಕಿರುವುದರಿಂದ 8 ಕ್ಷೇತ್ರಗಳ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ.

127 ಕ್ಷೇತ್ರಗಳಲ್ಲಿ ಪ್ರತಿ ಸ್ಪರ್ಧಿಗಳಿಲ್ಲದ ಕಾರಣ ಅವಾಮಿ ಲೀಗ್ ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿತ್ತು. ಇದರೊಂದಿಗೆ 147 ವಿಜೇತ ಅಭ್ಯರ್ಥಿಗಳು ಸೇರಿ ಒಟ್ಟು 231 ಸ್ಥಾನಗಳನ್ನು ಹೊಂದಿರುವ ಅವಾಮಿ ಲೀಗ್ ಮೂರನೇ ಒಂದರಷ್ಟು ಬಹುಮತ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.