ಕೈರೊ (ಪಿಟಿಐ): ಪ್ರತಿಭಟನೆಗಳಿಂದ ತತ್ತರಿಸಿರುವ ಲಿಬಿಯಾದಲ್ಲಿ ಇನ್ನೂ 18 ಸಾವಿರ ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದು, ಮರುಭೂಮಿಯ ಮೂಲಕ ಈಜಿಪ್ಟ್ ಗಡಿಯೊಳಗೆ ಅವರನ್ನು ಕರೆತರುವುದಕ್ಕೆ ಈಜಿಪ್ಟ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಕ್ರಮ ಕೈಗೊಂಡಿದೆ.

ಭಾರತ ಸರ್ಕಾರ ಈಗಾಗಲೇ ವಿಶೇಷ ವಿಮಾನಗಳು ಮತ್ತು ಹಡಗಿನ ಮೂಲಕ ಜನರನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ರಸ್ತೆ ಮೂಲಕವೂ ಜನರನ್ನು ದೇಶದಿಂದ ಹೊರಕ್ಕೆ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಟನೆ ಸಂದರ್ಭದಲ್ಲಿ ದಾಖಲೆ ಪತ್ರಗಳು ಕಳೆದು ಕೊಂಡವರಿಗೆ ಹೊಸದಾಗಿ ಪ್ರಯಾಣ ದಾಖಲೆ ಪತ್ರಗಳನ್ನು ನೀಡಲಾಗುತ್ತಿದೆ.ಭಾರತೀಯರ ಸುರಕ್ಷಿತ ನಿರ್ಗಮನಕ್ಕೆ ಅವಕಾಶ ಮಾಡಿಕೊಡುವಂತೆ ವಿದೇಶಾಂಗ ವ್ಯವಹಾರ ಸಚಿವ ಎಸ್. ಎಂ. ಕೃಷ್ಣ ಲಿಬಿಯಾದ ತಮ್ಮ ಸಹವರ್ತಿ ಮುಸ್ಸಾ ಕುಸ್ಸಾ ಅವರಲ್ಲಿ ಕೋರಿದ್ದಾರೆ.

ಲಿಬಿಯಾಕ್ಕೆ ಪ್ರತಿದಿನ ಒಂದೊಂದು ಯಾನ ಕೈಗೊಂಡು ಭಾರತೀಯರನ್ನು ಕರೆತರಲು ಸರ್ಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.