ಬೆಂಗಳೂರು: ಭಾರತದಲ್ಲಿ 2010–14ರ ಅವಧಿಯಲ್ಲಿ ಜನರ ಸರಾಸರಿ ಜೀವಿತಾವಧಿ 67 ವರ್ಷ 11 ತಿಂಗಳಿಗೆ ಏರಿಕೆಯಾಗಿದೆ. ಮಾದರಿ ನೋಂದಣಿ ವ್ಯವಸ್ಥೆಯು (ಎಸ್‌ಆರ್‌ಎಸ್) ಈ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಿದೆ.

ಮಹಿಳೆಯರು, ಪುರುಷರು, ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಸರಾಸರಿ ಜೀವಿತಾವಧಿಯ ಪ್ರತ್ಯೇಕ ಮಾಹಿತಿಯನ್ನು ವರದಿಯಲ್ಲಿ ನೀಡಲಾಗಿದೆ. ಗಂಡಸರಿಗಿಂತ ಹೆಂಗಸರ ಸರಾಸರಿ ಜೀವಿತಾವಧಿ ಹೆಚ್ಚು ಎಂಬ ಅಂಶ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೆಚ್ಚು ನಿಖರವಾದ ಮಾಹಿತಿ ಪಡೆಯುವುದಕ್ಕಾಗಿ ಐದು ವರ್ಷಗಳ ಅವಧಿಯ ಅಂಕಿ ಅಂಶವನ್ನು ವಿಶ್ಲೇಷಣೆ ನಡೆಸಿ ಸರಾಸರಿ ಜೀವಿತಾವಧಿಯನ್ನು ನಿರ್ಧರಿಸಲಾಗುತ್ತದೆ.

1970–75ರ ಅವಧಿಯಲ್ಲಿ ದೇಶದಲ್ಲಿ ಮೊದಲ ಬಾರಿ ಸರಾಸರಿ ಜೀವಿತಾವಧಿ ಸಮೀಕ್ಷೆ ನಡೆಸಲಾಗಿತ್ತು. ನಂತರ ಪ್ರತಿ ವರ್ಷವೂ ಐದು ವರ್ಷಗಳ ಅಂಕಿ ಅಂಶ ವಿಶ್ಲೇಷಣೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತಿದೆ. ಒಂದು ಕೋಟಿಗಿಂತ ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಮಾತ್ರ ಸಮೀಕ್ಷೆ ನಡೆಸಲಾಗಿದೆ.

ಮೊದಲ ಸಮೀಕ್ಷೆ ಸಂದರ್ಭದಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ (49.0) ಪುರುಷರಿಗಿಂತ (50.5) ಕಡಿಮೆ ಇತ್ತು. 1981–85ರ ಅವಧಿಯ ನಂತರ ಇದು ಬದಲಾಗಿದೆ. 2010–14ರ ಅವಧಿಯಲ್ಲಿ ಮಹಿಳೆಯರ ಸರಾಸರಿ ಜೀವಿತಾವಧಿ 69.6 ವರ್ಷವಾಗಿದ್ದರೆ ಪುರುಷರ ಜೀವಿತಾವಧಿ 66.4 ವರ್ಷ. ಆರಂಭದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಜನರ ಸರಾಸರಿ ಜೀವಿತಾವಧಿಯ ನಡುವೆ ಗಣನೀಯ ಅಂತರ ಇತ್ತು. ಆದರೆ ಇದು ಈಗ ಬಹಳ ತಗ್ಗಿದೆ.

1= 1 ತಿಂಗಳು, .2= ಎರಡೂವರೆ ತಿಂಗಳು, .3= ಮೂರೂವರೆ ತಿಂಗಳು, .4= 5 ತಿಂಗಳು, .5=6 ತಿಂಗಳು, .6= 7 ತಿಂಗಳು, .7= ಎಂಟೂವರೆ ತಿಂಗಳು, .8=ಒಂಬತ್ತೂವರೆ ತಿಂಗಳು, .9=11 ತಿಂಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.