ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಕಬಳಿಕೆ:ಮತ್ತೊಬ್ಬ ಸಚಿವರ ಬಂಧನ

Last Updated 23 ಜನವರಿ 2012, 6:40 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್ಎಸ್): ಭೂ ಕಬಳಿಕೆ ಆರೋಪದ ಮೇಲೆ ತಮಿಳು ನಾಡು ಪೊಲೀಸರು, ಹಿಂದಿನ ಡಿಎಂಕೆ ಪಕ್ಷದ  ಆಡಳಿತವಿದ್ದಾಗ ಸಚಿವರಾಗಿದ್ದ ಎಂ.ಪಿ. ಸಾಮಿನಾಥನ್ ಅವರನ್ನು ಸೋಮವಾರ ಬಂಧಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಹಿಂದಿನ ಡಿಎಂಕೆ ಸರ್ಕಾರದಲ್ಲಿ ಹೆದ್ದಾರಿ ಖಾತೆಯ ಸಚಿವರಾಗಿದ್ದ ಸಾಮಿನಾಥನ್ ಅವರನ್ನು ಇಲ್ಲಿಂದ 400 ಕಿ.ಮೀ ದೂರದ ತಿರುಪುರ್ ನಲ್ಲಿನ ಅವರ ಮನೆಯಲ್ಲಿ ಬಂಧಿಸಲಾಗಿದೆ.

ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವು ಕಳೆದ ಸಾಲಿನ ಮೇ ತಿಂಗಳು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಭೂ ಕಬಳಿಕೆ ಆರೋಪದ ಮೇಲೆ ಡಿಎಂಕೆ ಪಕ್ಷದ ಹಲವಾರು ಹಿರಿಯ ನಾಯಕರನ್ನು ಮತ್ತು ಸಚಿವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. 

ಮಾಜಿ ಸಚಿವರಾದ ಕೆ. ಪೊನ್ನಮುಡಿ, ಕೆ.ಎನ್.ನೆಹ್ರೂ ವೀರಪಾಂಡಿ ಆರ್ಮುಗಮ್ ಮೊದಲಾದವರು ಭೂ ಕಬಳಿಕೆ ಆರೋಪದ ಮೇಲೆ ಬಂಧಿತರಾದವರಲ್ಲಿ ಸೇರಿದ್ದಾರೆ.

ಇವರಲ್ಲದೇ ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟ್ಯಾಲಿನ್ ಅವರ ವಿರುದ್ಧವೂ ಭೂ ಕಬಳಿಕೆಯ ಆರೋಪದ ಮೇಲೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಎಐಡಿಎಂಕೆ ಸರ್ಕಾರವು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಭೂ ಕಬಳಿಕೆ ಪ್ರಕರಣಗಳ ತನಿಖೆಗಾಗಿಯೇ ವಿಶೇಷ ತನಿಖಾ ವಿಭಾಗವನ್ನು ತೆರೆದಿದೆ.

 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT