ಜಿನೀವಾ/ನವದೆಹಲಿ : ಲಿಂಗ ಸಮಾನತೆಯ ಪಟ್ಟಿಯಲ್ಲಿ ಭಾರತಕ್ಕೆ ಈ ವರ್ಷ 87ನೆಯ ಸ್ಥಾನ ಲಭಿಸಿದೆ. ಐಸ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಲಿಂಗ ಸಮಾನತೆಯ ಪಟ್ಟಿಯಲ್ಲಿ 108ನೇ ಸ್ಥಾನ ಪಡೆದಿತ್ತು. ಜಿನೀವಾ ಮೂಲದ ‘ವಿಶ್ವ ಆರ್ಥಿಕ ವೇದಿಕೆ’ ಈ ಪಟ್ಟಿ ಸಿದ್ಧಪಡಿಸುತ್ತದೆ.

ಅರ್ಥ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಹಾಗೂ ರಾಜಕೀಯ ಪ್ರಾತಿನಿಧ್ಯ ಕ್ಷೇತ್ರಗಳನ್ನು ಪರಿಶೀಲಿಸಿ ಲಿಂಗ ಸಮಾನತೆಯ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ಹೇಳುತ್ತದೆ.ಶಿಕ್ಷಣ ಕ್ಷೇತ್ರದಲ್ಲಿ ಭಾರತ ಬಹುದೊಡ್ಡ ಪ್ರಮಾಣದಲ್ಲಿ ಸುಧಾರಣೆ ಕಂಡುಕೊಂಡಿದೆ.

‘ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಭಾರತ ಲಿಂಗ ಸಮಾನತೆಯ ಅಂತರವನ್ನು ಸಂಪೂರ್ಣವಾಗಿ ನಿವಾರಿಸಿದೆ’ ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಆದರೆ ಅರ್ಥ ವ್ಯವಸ್ಥೆಗೆ ಮಾತ್ರ ಸಂಬಂಧಿಸಿದ ಲಿಂಗ ಸಮಾನತೆಯ ಪಟ್ಟಿಯಲ್ಲಿ ದೇಶ 136ನೇ ಸ್ಥಾನ ಪಡೆದಿದೆ. ರಾಜಕೀಯ ಪ್ರಾತಿನಿಧ್ಯ ಕ್ಷೇತ್ರದಲ್ಲಿ ಭಾರತ ಮೊದಲ 10 ದೇಶಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.

ಅರ್ಥ ವ್ಯವಸ್ಥೆಯಲ್ಲಿನ ಲಿಂಗ ಅಸಮಾನತೆ 2133ರ ವೇಳೆಗೆ ನಿವಾರಣೆಯಾಗುತ್ತದೆ ಎಂದು 2015ರ ವರದಿ ಹೇಳಿದೆ. ಕೆಲಸದ ಸ್ಥಳಗಳಲ್ಲಿ ಲಿಂಗ ಆಧರಿತ ಅಸಮಾನತೆ ನಿವಾರಣೆ 2186ರ ಮುನ್ನ ಸಾಧ್ಯವಿಲ್ಲ ಎಂದು ಈ ಬಾರಿಯ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.