ಚಂಡೀಗಡ (ಐಎಎನ್‌ಎಸ್): ಅಲೋಪತಿ, ಆಯುರ್ವೇದ, ಹೋಮಿಯೋಪತಿ ವೈದ್ಯರು ನೀಡುವ ವೈದ್ಯಕೀಯ ಜಾಹೀರಾತಿನ ಮೇಲೆ ಪಂಜಾಬ್ ಸರ್ಕಾರ ಭಾನುವಾರ ನಿಷೇಧ ವಿಧಿಸಿದೆ.

`ಈ ವೈದ್ಯ ಪದ್ಧತಿಯಡಿ ವಿವಿಧ ರೋಗಗಳಿಗೆ ಮತ್ತು ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡುವ ಜಾಹೀರಾತುದಾರರು ಸಮಸ್ಯೆ ಉಂಟು ಮಾಡುತ್ತಿರುವುದನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇಂತಹ ಜಾಹೀರಾತು ನೀಡುವ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಅರುಣೇಶ್ ಶೇಖರ್ ತಿಳಿಸಿದ್ದಾರೆ.

`ದುರ್ದೈವದ ಸಂಗತಿ ಎಂದರೆ ಕೆಲವು ವೈದ್ಯರು ಲೈಂಗಿಕ ಸಮಸ್ಯೆ ಬಗೆಹರಿಸುವುದಾಗಿ ಜಾಹೀರಾತುಗಳ ಮೂಲಕ ಹೇಳುತ್ತಿದ್ದಾರೆ. ಗಂಡು ಮಗು ಪಡೆಯುವ ಬಗ್ಗೆಯೂ ಭರವಸೆ ನೀಡುತ್ತಿದ್ದಾರೆ. ಆದರೆ ದೇಶದಲ್ಲಿಯೇ ಪಂಜಾಬ್ ರಾಜ್ಯದ ಲಿಂಗಾನುಪಾತದಲ್ಲಿ ಬಹಳಷ್ಟು ವ್ಯತ್ಯಾಸವಿದೆ~ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.