ನವದೆಹಲಿ (ಪಿಟಿಐ): ಮಾಹಿತಿ ಆಯೋಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಸುಷ್ಮಾ ಸಿಂಗ್ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಷ್ಮಾ ಅವರಿಗೆ ಪ್ರಣವ್ ಮುಖರ್ಜಿ ಅಧಿಕಾರ ಗೌಪ್ಯತೆ ಬೋಧಿಸಿದರು.

ಈ ವೇಳೆ ಪ್ರಧಾನಿ ಡಾ. ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಧಾನಿ ಸಿಂಗ್, ಲೋಕಸಭಾ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಕಾನೂನು ಸಚಿವ ಕಪಿಲ್ ಸಿಬಲ್ ಅವರನ್ನೊಳಗೊಂಡ ಸಮಿತಿ, ಸುಷ್ಮಾ ಸಿಂಗ್ ಅವರನ್ನು ಮಾಹಿತಿ ಆಯೋಗದ ನೂತನ ಮುಖ್ಯಸ್ಥೆಯನ್ನಾಗಿ (ಸಿಐಸಿ) ಸರ್ವಾನುಮತದಿಂದ ನೇಮಿಸಿತ್ತು.

64 ವರ್ಷದ ಮಾಜಿ ಐಎಎಸ್ ಅಧಿಕಾರಿಯಾಗಿರುವ ಸುಷ್ಮಾ ಸಿಂಗ್, ಸಿಐಸಿ ಸ್ಥಾನ ಅಲಂಕರಿಸಿದ ಎರಡನೇ ಮಹಿಳೆ. ಇದೇ ತಿಂಗಳು ನಿವೃತ್ತರಾಗಲಿರುವ ದೀಪಕ್ ಸಂಧು ಅವರು ಸಿಐಸಿ ಸ್ಥಾನ ಅಲಂಕರಿಸಿದ ಮೊದಲ ಮಹಿಳೆ. ಸಂಧು ಅವರು 2013 ಸೆಪ್ಟಂಬರ್ 5 ರಂದು ಸಿಐಸಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.