ಗಾಜಿಯಾಬಾದ್ (ಪಿಟಿಐ): ಆರುಷಿ ತಲ್ವಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಯಾವುದೇ ಸಿನಿಮಾ ನಿರ್ಮಾಣ ಕ್ಕಾಗಲೀ ಅಥವಾ ಕೃತಿ ರಚನೆಗಾಗಲೀ ಜೈಲಿನಲ್ಲಿರುವ ರಾಜೇಶ್ ಮತ್ತು ನೂಪುರ್ ತಲ್ವಾರ್ ಅನುಮತಿ ನೀಡಿಲ್ಲ. ಅವರ ಅನುಮತಿ ಇಲ್ಲದೇ ಚಿತ್ರ ನಿರ್ಮಾಣ ಅಥವಾ ಪುಸ್ತಕ ಬರೆದಲ್ಲಿ ಅಂಥವರು ಕಾನೂನು ಕ್ರಮ ಎದುರಿಸ ಬೇಕಾಗುತ್ತದೆ ಎಂದು ತಲ್ವಾರ್ ದಂಪತಿ ಪರ ವಕೀಲರು ತಿಳಿಸಿದ್ದಾರೆ.

ಪತ್ರಿಕಾ ವರದಿಗಳಿಂದ ತಲ್ವಾರ್ ದಂಪತಿ ತೀವ್ರ ಖಿನ್ನತೆಗೊಳಗಾಗಿದ್ದಾರೆ. ಆರುಷಿ ಪ್ರಕರಣ ಕುರಿತು ಹಾಲಿವುಡ್ ಅಥವಾ ಬಾಲಿವುಡ್ ನಿರ್ದೇಶಕರು ಸಿನಿಮಾ ತೆಗೆಯುವುದು ದಂಪತಿಗೆ ಇಷ್ಟವಿಲ್ಲ ಎಂದು ತಲ್ವಾರ್ ದಂಪತಿ ಪರ ವಕೀಲ ಮನೋಜ್ ಸಿಸೊಡಿಯ ಭಾನುವಾರ ಹೇಳಿದ್ದಾರೆ. ತಾವು ಬಹುವಾಗಿ ಪ್ರೀತಿಸುತ್ತಿದ್ದ ಮಗಳ ಕೊಲೆ ಪ್ರಕರಣ ಇಟ್ಟುಕೊಂಡು ಪುಸ್ತಕ ಬರೆದು, ಚಿತ್ರ ತೆಗೆದು ಹಣ ಮಾಡಲು ಉದ್ದೇಶಿಸಿರುವವರನ್ನು ಕಂಡು ತಲ್ವಾರ್ ದಂಪತಿ ಬೇಸರಗೊಂಡಿ ದ್ದಾರೆ.

ಶಿಕ್ಷೆ ಪ್ರಕಟಣೆಯ ನಂತರ ದಂಪತಿ ತೀವ್ರ ಆಘಾತಕ್ಕೊಳಗಾಗಿದ್ದು, ಇನ್ನೂ ಚೇತರಿಸಿಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ. ತಲ್ವಾರ್ ದಂಪತಿಯ ಅನುಮತಿ ಇಲ್ಲದೇ ಅಥವಾ ಗಮನಕ್ಕೆ ತಾರದೇ ಯಾರಾದರೂ ಚಿತ್ರ ನಿರ್ಮಿಸಿದಲ್ಲಿ, ಪುಸ್ತಕ ಬರೆದಲ್ಲಿ ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾ ಗುವುದು ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.