ನವದೆಹಲಿ (ಪಿಟಿಐ): ‘ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಶುದ್ಧಹಸ್ತ’ ಎಂದು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ ಬಣ್ಣಿಸಿದ್ದಾರೆ’ ಎಂಬುದಾಗಿ ಕೆಲವು ದಿನಗಳಿಂದ ಅಂತರ್ಜಾಲಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯನ್ನು ಪಕ್ಷವೇ ಹರಿಯಬಿಟ್ಟಿದೆ ಎಂದು ವಿಕಿಲೀಕ್ಸ್ ಬಹಿರಂಗಪಡಿಸಿದೆ.

ಮಹಾರಾಷ್ಟ್ರ ಬಿಜೆಪಿ ಪ್ರಚಾರ ಘಟಕದ ಸಹ ಸಂಚಾಲಕಿ ಪ್ರೀತಿ ಗಾಂಧಿ ಎಂಬ ಕಾರ್ಯಕರ್ತೆ ಅಂತರ್ಜಾಲದಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಿಯ ಬಿಟ್ಟಿದ್ದಾರೆ ಎಂದು ಸಂಸ್ಥೆ ಹೇಳಿದೆ. ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳ ಮುಂದೆ ಮೋದಿ ಅವರನ್ನು ಹೀಗೆ ಬಣ್ಣಿಸಿರುವುದು ರಾಜ್ಕೋಟ್ನ ಕಾಂಗ್ರೆಸ್ ನಾಯಕ ಮನೋಹರ ಸಿಂಗ್ ಜಡೇಜಾ ಅವರೇ ಹೊರತು ಅಸಾಂಜ್ ಅಲ್ಲ ಎಂದೂ ಸಂಸ್ಥೆ ಸ್ಪಷ್ಟಪಡಿಸಿದೆ.

‘ಮೋದಿ ಭ್ರಷ್ಟರಲ್ಲದ ಕಾರಣ ಅಮೆರಿಕ ಅವರಿಗೆ ಹೆದರುತ್ತಿದೆ ಎಂದು ವಿಕಿಲೀಕ್ಸ್ ಸಂಸ್ಥಾಪಕ ಅಸಾಂಜ್ ಹೇಳಿದ್ದಾರೆ’ ಎಂಬ ಹೇಳಿಕೆಯುಳ್ಳ ಭಿತ್ತಿಚಿತ್ರ ಹಾಗೂ ಫಲಕಗಳನ್ನು ಬಿಜೆಪಿ ಬೆಂಬಲಿಗರು ಅಹಮದಾಬಾದ್ನಲ್ಲಿ ಇತ್ತೀಚೆಗೆ ಪ್ರದರ್ಶಿಸಿದ್ದರು. ಇದರಿಂದ ಕೆರಳಿರುವ ವಿಕಿಲೀಕ್ಸ್, ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲು ಬಿಜೆಪಿ ಇಂತಹ ಸುಳ್ಳು ಸುದ್ದಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದೆ.

‘ಪ್ರಮಾಣಪತ್ರ ಬೇಕಿಲ್ಲ’
‘ಮೋದಿ ಅವರಿಗೆ ವಿಕಿಲೀಕ್ಸ್ ಅಥವಾ ಅಸಾಂಜ್ ಪ್ರಮಾಣಪತ್ರ ಬೇಕಿಲ್ಲ’ ಎಂದು ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ತಿರುಗೇಟು ನೀಡಿದ್ದಾರೆ.

ಅಮೆರಿಕ ತಂತಿ ಸಂದೇಶ ಬಹಿರಂಗ
‘ಮೋದಿ ಸಂಕುಚಿತ ಮನೋಭಾವದ ಹಾಗೂ ನಂಬಿಕೆಗೆ ಅನರ್ಹವಾದ ವ್ಯಕ್ತಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸುವ ಬದಲು ಭಯವನ್ನು ಹುಟ್ಟು ಹಾಕುತ್ತಿದ್ದಾರೆ’ ಹೀಗಂತ ಮುಂಬೈನಲ್ಲಿರುವ ಅಮೆರಿಕ ಕಾನ್ಸುಲ್ ಜನರಲ್ ಮೈಕೆಲ್ ಎಸ್ ಓವನ್, 2006ರಲ್ಲಿ ಮೋದಿ ಅವರನ್ನು ಭೇಟಿಯಾದ ನಂತರ ಅಮೆರಿಕಕ್ಕೆ ಕಳುಹಿಸಿದ್ದ ರಹಸ್ಯ ಸಂದೇಶದಲ್ಲಿ ತಿಳಿಸಿದ್ದರು ಎಂದು ವಿಕಿಲೀಕ್ಸ್ ಇದೇ ವೇಳೆ ಬಹಿರಂಗಪಡಿಸಿದೆ.

ಅಧಿಕಾರದಲ್ಲಿರುವ ಮೋದಿ, ಪಕ್ಷದ ಹಿರಿಯ ಪದಾಧಿಕಾರಿಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳದ ಅಸಭ್ಯ ವರ್ತನೆಯ ಮನುಷ್ಯ. ಇದೇ ಮೋದಿ ನಾಯಕತ್ವದ ಶೈಲಿ ಎಂದು ಅಮೆರಿಕದ ಕಾನ್ಸುಲ್ ಜನರಲ್ ಬಣ್ಣಿಸಿದ್ದರು. ಆದರೆ, ಭಾರತದ ಉಳಿದ ರಾಜಕಾರಣಿಗಳಂತೆ ಮೋದಿ, ಶ್ರೀಮಂತರಾಗಲು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ ಎಂಬ ಮಾತುಗಳನ್ನೂ ಹೇಳಿದ್ದರು.

ರಾಜ್ಯದ ಕೆಳ ಮತ್ತು ಮಧ್ಯಮ ಹಂತದ ಆಡಳಿತ ಯಂತ್ರದಲ್ಲಿ ಸಣ್ಣಪುಟ್ಟ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮಾತ್ರ ಅವರು ಸಫಲರಾಗಿದ್ದಾರೆ. ಆದರೆ, ಉನ್ನತ ಹಂತದಲ್ಲಿ ಇನ್ನೂ ಭ್ರಷ್ಟಾಚಾರ ಮೊದಲಿನಂತೆಯೇ ಉಳಿದುಕೊಂಡಿದೆ ಎಂದೂ ಕಾನ್ಸುಲ್ ಜನರಲ್ ತಿಳಿಸಿದ್ದರು ಎಂದು ವಿಕಿಲೀಕ್ಸ್ ಈ ಸಂದರ್ಭದಲ್ಲಿ ಬಹಿರಂಗಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.