ಗಾಜಾ ಸಿಟಿ (ಎಪಿ): ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ಟೀನ್ ಉಗ್ರವಾದಿಗಳ ನಡುವಿನ ಸಂಘರ್ಷ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿತು. ಪ್ಯಾಲೆಸ್ಟೀನ್‌ನ ಇಸ್ಲಾಮಿಕ್ ಜಿಹಾದಿ ಗುಂಪು ಇಸ್ರೇಲ್‌ನತ್ತ 100ಕ್ಕೂ ಹೆಚ್ಚು ರಾಕೆಟ್‌ಗಳನ್ನು ಪ್ರಯೋಗಿಸಿತು. ಗಾಜಾ ಪಟ್ಟಿ ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳು ದಾಳಿ ನಡೆಸಿದವು.
ಈ ದಾಳಿಯಿಂದ ಗಾಜಾ ಅಥವಾ ಇಸ್ರೇಲ್‌ನಲ್ಲಿ ಉಂಟಾಗಿರುವ ಸಾವು ನೋವಿನ ಕುರಿತ ಮಾಹಿತಿ ಸಧ್ಯಕ್ಕೆ ಲಭ್ಯವಾಗಿಲ್ಲ.
ನಬ್ಲಸ್ ನಗರದ ಬಲಾಟ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದ್ದು, ಪ್ಯಾಲೆಸ್ಟೀನ್‌ನ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದವರ ಗುರುತನ್ನು ಪ್ಯಾಲೆಸ್ಟೀನ್‌ನ ಆರೋಗ್ಯ ಸಚಿವರು ಪತ್ತೆ ಮಾಡಿದ್ದಾರೆ. ಪ್ಯಾಲೆಸ್ಟೀನ್‌ನ ಇತರು ಮೂವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಇಸ್ಲಾಮಿಕ್ ಜಿಹಾದ್ ಕಮಾಂಡರ್ ಮೊಹಮ್ಮದ್ ಅಬು ಅಲ್ ಅತ್ತಾಗೆ ಸೇರಿದ ಅಪಾರ್ಟ್‌ಮೆಂಟ್ ಸೇರಿ ಇನ್ನಿತರ ಕಟ್ಟಡಗಳ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಕದನವಿರಾಮ ಘೋಷಿಸುವ ಸಾಧ್ಯತೆ ಕ್ಷೀಣಿಸಿದೆ.
ಈ ಸಂಘರ್ಷದಲ್ಲಿ ಪ್ಯಾಲೆಸ್ಟೀನ್‌ನ 33 ಜನ ಮೃತಪಟ್ಟಿದ್ದು ಸುಮಾರು 147 ಜನ ಗಾಯಗೊಂಡಿದ್ದಾರೆ ಎಂದು ಅಲ್ಲಿಯ ಆರೋಗ್ಯ ಸಚಿವಾಲಯ ತಿಳಿಸಿದೆ.