‘ವಿದ್ಯುತ್ ಗ್ಯಾರಂಟಿ ಕಲ್ಪಿಸಿ’
‘ಈ ಬಾರಿ ಮುಂಗಾರು ಮಳೆಕೈಕೊಟ್ಟಿದ್ದು, ಬೆಳೆಗಳು ನೆಲಕಚ್ಚಿವೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಪಂಪ್‌ಸೆಟ್‌ಗಳು ಹಾಳಾಗುತ್ತಿವೆ. ವೋಲ್ಟೇಜ್ ಸಮಸ್ಯೆಯಿಂದ ವಿದ್ಯುತ್ ಪರಿವರ್ತಕಗಳು ಸುಟ್ಟಿವೆ. ಬರಗಾಲದಿಂದ ರೈತರು ಸಾಲದ ಸುಳಿಯಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ ನಿತ್ಯ 7 ಗಂಟೆ ವಿದ್ಯುತ್ ಪೂರೈಸಲು ಸರ್ಕಾರ ವಿಫಲವಾಗಿದೆ. ರೈತರ ಪಾಲಿಗೆ ‘ವಿದ್ಯುತ್ ಗ್ಯಾರಂಟಿ’ ಇಲ್ಲವಾಗಿದೆ’ ಎಂದು ರೈತಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪಹುಚ್ಚಣ್ಣನವರ ತಿಳಿಸಿದರು.