ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗಕ್ಕೆ ಸ್ಲೋವಾಕಿಯಾಕ್ಕೆ ತೆರಳಿದ 94 ಅಭ್ಯರ್ಥಿಗಳು

Published 22 ಜೂನ್ 2024, 22:30 IST
Last Updated 22 ಜೂನ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಐಟಿಐ, ಡಿಪ್ಲೊಮಾ ಪೂರ್ಣಗೊಳಿಸಿದ 94 ಅಭ್ಯರ್ಥಿಗಳಿಗೆ ಸ್ಲೋವಾಕಿಯಾ ದೇಶದಲ್ಲಿ ಉದ್ಯೋಗ ಕಲ್ಪಿಸುವಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮವು ಯಶಸ್ವಿಯಾಗಿದೆ.

ಸ್ಲೋವಾಕಿಯಾ ದೇಶವು 2,500 ಹುದ್ದೆಗಳ ನೇಮಕಾತಿಗೆ ಇತ್ತೀಚೆಗೆ ಪ್ರಕ್ರಿಯೆ ಆರಂಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕೌಶಲಾಭಿವೃದ್ಧಿ, ಜೀವನೋಪಾಯ ಸಚಿವ ಶರಣಪ್ರಕಾಶ ಪಾಟೀಲ, ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಿ, ಆ ದೇಶಕ್ಕೆ ಅರ್ಹರನ್ನು ಕಳುಹಿಸಲು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅದರ ಅನ್ವಯ ಮೊದಲ ಹಂತದಲ್ಲಿ 54 ಮಂದಿ ಐಟಿಐ ಮತ್ತು 31 ಮಂದಿ ಡಿಪ್ಲೊಮಾ ಕೋರ್ಸ್‌ ಮುಗಿಸಿದವರು ಆಯ್ಕೆಯಾಗಿದ್ದಾರೆ.

‘ಆಯ್ಕೆಯಾದವರಿಗೆ ಬಿಡದಿಯ ಟೊಯೊಟಾ ಕಿರ್ಲೋಸ್ಕರ್‌ ಕಂಪನಿಯಲ್ಲಿ ತರಬೇತಿ ನೀಡಲಾಗಿದೆ. ಈ ತರಬೇತಿಗೆ ವೆಚ್ಚವಾದ ₹ 35 ಸಾವಿರವನ್ನು ಇಲಾಖೆಯಿಂದ ಭರಿಸಲಾಗಿದೆ. ಸ್ಲೋವಾಕಿಯಾದಲ್ಲಿ ಉದ್ಯೋಗಕ್ಕೆ ಅರ್ಹರಾದವರು ತಿಂಗಳಿಗೆ 970 ಯೂರೊ (₹ 86 ಸಾವಿರ) ವೇತನ ಪಡೆಯಲಿದ್ದಾರೆ. ಆ ದೇಶಕ್ಕೆ ತೆರಳಿದ ಮೊದಲ ತಂಡಕ್ಕೆ ಜೂನ್ 5ರಂದು, ಎರಡನೇ ತಂಡಕ್ಕೆ 20ರಂದು ಬೀಳ್ಕೊಡಲಾಗಿದೆ. ಇದೇ 24 ಮತ್ತು ಜುಲೈ 1ರಂದು ಉಳಿದವರು ತೆರಳಲಿದ್ದಾರೆ ಎಂದು ಸಚಿವ ಶರಣಪ್ರಕಾಶ ತಿಳಿಸಿದ್ದಾರೆ.

‘ನಿಗಮವು 37 ಚಾಲಕರನ್ನು ಈಗಾಗಲೇ ಹಂಗೇರಿ‌ ದೇಶಕ್ಕೆ ಕಳುಹಿಸಿದೆ. ಅಲ್ಲದೆ, ಮಾರಿಷಸ್‍ಗೆ ವೆಲ್ಡರ್‌ಗಳು, ಬಾಯ್ಲರ್‌ ತಯಾರಕರನ್ನು ಉದ್ಯೋಗಕ್ಕೆ ಕಳುಹಿಸಲಾಗುವುದು. ಆಸ್ಟ್ರೇಲಿಯಾ, ಜಪಾನ್, ಫಿನ್‌ಲ್ಯಾಂಡ್, ಜರ್ಮನಿ, ನಾರ್ವೆ ಸೇರಿದಂತೆ ವಿವಿಧ ದೇಶಗಳಿಂದಲೂ ಬೇಡಿಕೆಯಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಂ. ಕನಗವಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT