ಬೆಂಗಳೂರು:ಗುಜ್ಜರ್ ಮದುವೆ ಪ್ರಕರಣದ ತನಿಖೆಗಾಗಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ಮಹಿಳಾ ಆಯೋಗದ ಹಿಂದಿನ ಅಧ್ಯಕ್ಷೆ ಮಂಜುಳಾ ಮಾನಸ ಭೇಟಿ ಕೊಟ್ಟಾಗ, ಅಲ್ಲಿನವರು ಹೇಳಿದ ಕಥೆ ಗಟ್ಟಿಗುಂಡಿಗೆಯನ್ನೂ ನಡುಗಿಸುವಂತಿದೆ.

ಇದನ್ನೂ ಓದಿ:*ಹೆಣ್ಣು ಭ್ರೂಣ ಹತ್ಯೆ | ಕರುಳಬಳ್ಳಿ ಕತ್ತರಿಸುವ ಮೊದಲೇ ಕೊರಳು ಕೊಯ್ಯುವ ಕಿರಾತಕರು

ವೈದ್ಯದಂಪತಿಗಳಿಬ್ಬರು ಹೈದರಾಬಾದ್ ಗಡಿಭಾಗದಲ್ಲಿ ಖಾಸಗಿ ನರ್ಸಿಂಗ್ ಹೋಂ ನಡೆಸುತ್ತಿದ್ದರು. ಸರ್ಕಾರಿ ವೃತ್ತಿಯಲ್ಲಿದ್ದರೂ ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದ ವಿಷಯ ಗೊತ್ತಾಗಿ ಕೆಲಸದಿಂದ ತೆಗೆದುಹಾಕಲಾಗಿತ್ತು. ದೊಡ್ಡ ಮನೆಯಲ್ಲೇ ನರ್ಸಿಂಗ್ ಹೋಂ ನಡೆಸುತ್ತಿದ್ದ ವೈದ್ಯದಂಪತಿ, ಮನೆಯ ತಳಮಹಡಿಯ ವಿಶಾಲವಾದ ಜಾಗದಲ್ಲಿ ಹತ್ತರಿಂದ ಹನ್ನೆರಡು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕಿದ್ದರು.

ಸುತ್ತಮುತ್ತಲಿನ ಜನರು ಇದು ವೈದ್ಯರ ಪ್ರಾಣಿಪ್ರೀತಿ ಅಂದುಕೊಂಡಿದ್ದರು. ಆದರೆ, ಈ ಬಗ್ಗೆ ಅನುಮಾನಗೊಂಡ ಸ್ಥಳೀಯ ಮಹಿಳೆಯೊಬ್ಬರು ತಮ್ಮ ಎಂಜಿನಿಯರ್ ಮಗನ ನೆರವಿನಿಂದ ತಳಮಹಡಿಯಲ್ಲಿ ಗೊತ್ತಾಗದಂತೆ ಸೂಕ್ಷ್ಮಕ್ಯಾಮೆರಾ ಅಳವಡಿಸಿ ಪರಿಶೀಲಿಸಿದಾಗ ಬೆಚ್ಚಿಬೀಳುವ ಸತ್ಯವೊಂದು ಅನಾವರಣಗೊಂಡಿತ್ತು.

ಸರ್ಕಾರಿ ನೌಕರಿ ತೊರೆದಿದ್ದ ಈ ದಂಪತಿ ಮನೆಯಲ್ಲೇ ಸ್ಕ್ಯಾನಿಂಗ್ ಸೆಂಟರ್ ಮೂಲಕ ಭ್ರೂಣಲಿಂಗ ಪತ್ತೆ ಹಚ್ಚಿ, ಹೆಣ್ಣು ಭ್ರೂಣವಿದ್ದರೆ ಅದನ್ನು ಗರ್ಭಪಾತ ಮಾಡುವ ಕೆಲಸವನ್ನೂ ಸದ್ದಿಲ್ಲದೇ ಮಾಡುತ್ತಿದ್ದರು. ಮನೆ ಊರಿನ ಹೊರಗಿದ್ದ ಕಾರಣ ಯಾರಿಗೂ ಅನುಮಾನ ಬರುತ್ತಿರಲಿಲ್ಲ. ಗರ್ಭಪಾತ ಮಾಡಲು ರೋಗಿಗಳಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಿದ್ದ ಈ ವೈದ್ಯರು ಗರ್ಭಪಾತದ ಮೂಲಕ ಹೊರತೆಗೆದ ಹೆಣ್ಣು ಭ್ರೂಣಗಳನ್ನು ಹೊರಗೆ ವಿಲೇವಾರಿ ಮಾಡಿದರೆ ಸಮಸ್ಯೆಯಾಗುತ್ತದೆಂದು ಮನಗಂಡಿದ್ದರು. ಅದಕ್ಕಾಗಿಯೇ ಹತ್ತಾರು ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕಿದ್ದರು ಮತ್ತು ಅವುಗಳಿಗೆ ಆಹಾರವಾಗಿ ಹೆಣ್ಣುಭ್ರೂಣಗಳನ್ನೇ ಕೊಡುತ್ತಿದ್ದರಂತೆ.

* ಇವನ್ನೂ ಓದಿ...
*ಸ್ಕ್ಯಾನಿಂಗ್ ‘ವಧಾ’ ಕೇಂದ್ರಗಳು | ಲಿಂಗ ಪತ್ತೆ, ಹೆಣ್ಣುಭ್ರೂಣ ಹತ್ಯೆ ಅವ್ಯಾಹತ

*ಲೆಕ್ಕವಿಲ್ಲದಷ್ಟು ಗರ್ಭಪಾತ ಮಾಡಿಸಿದ್ದೇನೆಂದ ವೈದ್ಯೆ

*ಗಂಡಿದ್ದರೂ ಹೆಣ್ಣೆಂದು ಹತ್ಯೆ!

*ಹೆಣ್ಣು ಭ್ರೂಣ ಹತ್ಯೆ | ಡಿಎಚ್ಒ ಕಚೇರಿಯಲ್ಲಿ ಏಜಂಟರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.