ಪಾಂಡವಪುರ: ‘ತಿಥಿ’ ಚಿತ್ರದ ಗಡ್ಡಪ್ಪ (ಚನ್ನೇಗೌಡ) ಅವರು ಅಸ್ವಸ್ಥರಾಗಿದ್ದು, ಮಾತು ನಿಂತಿದೆ. ಪಾರ್ಶ್ವವಾಯುವಿಗೆ ಒಳಗಾಗಿದ್ದು, ಮಾತು ಬರಲು ಬಹಳ ದಿನ ಹಿಡಿಯಬಹುದು ಎಂದು ನರರೋಗತಜ್ಞರು ಅಭಿಪ್ರಾಯಪಟ್ಟಿದ್ದಾರೆ.

5 ವರ್ಷಗಳಿಂದ ಹೃದಯರೋಗ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಡಿ. 24ರಂದು ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಹಲವು ಚಲನಚಿತ್ರಗಳಲ್ಲಿ ನಟಿಸಿ ಸಹಜ ಅಭಿನಯದಿಂದ ಜನಮನ್ನಣೆಗೆ ಪಾತ್ರರಾಗಿದ್ದರು. ಈಗ ಅವರಿಗೆ 82 ವರ್ಷ.

‘ಚಿಕಿತ್ಸೆ ನೀಡುತ್ತಿದ್ದು, ನಿಧಾನವಾಗಿ ಮಾತನಾಡಲು ಯತ್ನಿಸಬೇಕಿದೆ’ ಎಂದು ನರರೋಗ ತಜ್ಞ ಡಾ.ರಾಧಾಕೃಷ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.