ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಕರದಲ್ಲೇ ಮೇಲ್ವಿಚಾರಕರ ವೇತನ!

ಪಂಚಾಯತ್‌ ರಾಜ್‌ ಇಲಾಖೆ ಸುತ್ತೋಲೆಗೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರ ವಿರೋಧ
Published 5 ಫೆಬ್ರುವರಿ 2024, 23:45 IST
Last Updated 5 ಫೆಬ್ರುವರಿ 2024, 23:45 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಂಥಾಲಯ ಮೇಲ್ವಿಚಾರಕರ ಹೆಚ್ಚುವರಿ ವೇತನವನ್ನು ಗ್ರಾಮ ಪಂಚಾಯಿತಿಗಳೇ ಭರಿಸಬೇಕು ಎಂದು ಪಂಚಾಯತ್‌ ರಾಜ್‌ ಇಲಾಖೆ ಸೂಚಿಸಿದೆ.

ಈ ಕುರಿತು ಇಲಾಖೆ ಹೊರಡಿಸಿರುವ ಸುತ್ತೋಲೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ.

₹12 ಸಾವಿರ ಇದ್ದ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ವೇತನವನ್ನು 2023 ಸೆ.1ರಿಂದ ಅನ್ವಯವಾಗುವಂತೆ ₹15,196ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ವೇತನ ಹೆಚ್ಚಳವಾದರೂ ಸರ್ಕಾರ ಇಲ್ಲಿಯವರೆಗೂ ₹12 ಸಾವಿರವನ್ನಷ್ಟೇ ಪಾವತಿಸುತ್ತಿದೆ. ಹೆಚ್ಚಳದ ವೇತನ ಬಾಕಿ ₹3,196 ನೀಡುವಂತೆ ಮೇಲ್ವಿಚಾರಕರು ನಿರಂತರವಾಗಿ ಒತ್ತಾಯಿಸಿದ್ದರು. ನಾಲ್ಕು ತಿಂಗಳ ನಂತರ ಸುತ್ತೋಲೆ ಹೊರಡಿಸಿರುವ ಪಂಚಾಯತ್‌ ರಾಜ್‌ ಇಲಾಖೆ, ಸರ್ಕಾರ ಹಿಂದೆ ನೀಡುತ್ತಿದ್ದಂತೆ ₹12 ಸಾವಿರ ನೀಡುತ್ತದೆ. ಹೆಚ್ಚುವರಿ ವೇತನದ ಮೊತ್ತವನ್ನು ಆಯಾ ಗ್ರಾಮ ಪಂಚಾಯಿತಿಗಳೇ ನೀಡಬೇಕು. ಪಂಚಾಯಿತಿಗಳಲ್ಲಿ ಸಂಗ್ರಹಿಸುವ ಗ್ರಂಥಾಲಯ ಕರದಲ್ಲೇ ವೆಚ್ಚ ಸರಿದೂಗಿಸಬೇಕು ಎಂದು ಸೂಚಿಸಿದೆ.

ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಭೂಮಿ, ಮನೆ, ನಿವೇಶನ, ಕಟ್ಟಡ ಮತ್ತಿತರ ಸ್ವತ್ತುಗಳಿಂದ ತೆರಿಗೆ ಸಂಗ್ರಹ ಮಾಡುತ್ತವೆ. ನಿಯಮದಂತೆ ವಿವಿಧ ಸ್ವತ್ತುಗಳ ಮೇಲೆ ನಿಗದಿಪಡಿಸುವ ಕರದಲ್ಲಿ ಶೇ 6ರಷ್ಟು ಗ್ರಂಥಾಲಯದ ಉಪ ಕರವಾಗಿ ಸಂಗ್ರಹಿಸಲಾಗುತ್ತದೆ. ಇದೇ ಹಣದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹೆಚ್ಚುವರಿ ವೇತನ ಭರಿಸಬೇಕು ಎನ್ನುವುದು ಪಂಚಾಯತ್‌ ರಾಜ್‌ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ವಿವರಿಸಲಾಗಿದೆ. 

‘ಜಮೀನು ಮತ್ತು ನಿವೇಶನಗಳ ಮೌಲ್ಯ ಹೆಚ್ಚಳವಾಗಿದ್ದರಿಂದಾಗಿ ನಗರ ಪ್ರದೇಶಗಳಿಗೆ ಅಂಟಿಕೊಂಡ ಪಂಚಾಯಿತಿಗಳಿಗೆ ಉತ್ತಮ ಆದಾಯವಿದೆ. ಗ್ರಾಮೀಣ ಪ್ರದೇಶವನ್ನೇ ಒಳಗೊಂಡಿರುವ ಒಟ್ಟು ಗ್ರಾಮ ಪಂಚಾಯಿತಿಗಳ ಪೈಕಿ ಶೇ 90ರಷ್ಟರ ತೆರಿಗೆ ಸಂಗ್ರಹ ಅತ್ಯಂತ ಕಡಿಮೆ ಇದೆ. ಸಂಗ್ರಹಿತ ತೆರಿಗೆ ಮೊತ್ತದಲ್ಲಿನ ಶೇ 6ರಷ್ಟು ಗ್ರಂಥಾಲಯ ಕರವು, ಗ್ರಂಥಾಲಯದ ಕಸ ಗುಡಿಸಲೂ ಸಾಲುತ್ತಿಲ್ಲ. ಇನ್ನು ಹೆಚ್ಚುವರಿ ವೇತನ ಭರಿಸಲು ಹೇಗೆ ಸಾಧ್ಯ?. ಇಂತಹ ಸುತ್ತೋಲೆಗಳಿಂದ ಗ್ರಾಮ ಪಂಚಾಯಿತಿಗಳು ಇನ್ನಷ್ಟು ದುರ್ಬಲವಾಗುತ್ತವೆ’ ಎನ್ನುತ್ತಾರೆ ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT