ಬೆಂಗಳೂರು: ಅರಣ್ಯ ಮತ್ತು ಅರಣ್ಯಾಧಾರಿತ ಆದಿವಾಸಿ ಸಮುದಾಯಗಳ 6,856 ವಸತಿ ರಹಿತ ಕುಟುಂಬಗಳಿಗೆ ‘ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆ’ಯಡಿ ಮನೆಗಳನ್ನು ನಿರ್ಮಿಸಿಕೊಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಗುರುವಾರ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಇದಕ್ಕಾಗಿ ₹160 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಪ್ರತಿ ಮನೆಯನ್ನು ₹4.50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸೋಲಿಗ, ಹಸಲ, ಗೌಡ್ಲು, ಸಿದ್ದಿ, ಕುಡಿಯ, ಮಲೆಕುಡಿಯ, ಕಾಡು ಕುರುಬ, ಇರುಳಿಗ, ಬೆಟ್ಟ ಕುರುಬ, ಯರವ, ಪಣಿಯನ್ ಮತ್ತಿತರ ಸಮುದಾಯಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಅವರು ಹೇಳಿದರು.

ಉಪಖನಿಜ ನಿಯಮ ಸರಳೀಕರಣ: ರೈತರು ಮತ್ತು ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಉಪಖನಿಜಗಳು ಪೂರೈಕೆ ಮಾಡುವುದಕ್ಕೆ ಪೂರಕವಾಗಿ ‘ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳ ತಿದ್ದುಪಡಿ’ಗೆ ಒಪ್ಪಿಗೆ ನೀಡಲಾಗಿದೆ.

ಈ ತಿದ್ದುಪಡಿಯಿಂದಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ, ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡುವಾಗ, ಕೆರೆಗಳಲ್ಲಿ ಹೂಳು ತೆಗೆಯುವಾಗ, ಕೃಷಿ ಮತ್ತು ಮೀನುಗಾರಿಕೆ ಹೊಂಡಗಳ ನಿರ್ಮಾಣದ ಸಂದರ್ಭದಲ್ಲಿ ದೊರೆಯುವ ಮರಳು, ಕೆಂಪು ಕಲ್ಲು ಮತ್ತಿತರ ಉಪಖನಿಜಗಳನ್ನು ಬಳಕೆ ಮಾಡಿದ ನಂತರ ಉಳಿದದ್ದನ್ನು ಸಾಗಣೆ ಮಾಡಲು ಅವಕಾಶ ನೀಡಲಾಗುವುದು. ಆ ಸಂದರ್ಭದಲ್ಲಿ ರಾಜಧನ ಮತ್ತು ಇತರ ಪಾವತಿಗಳಲ್ಲಿ ಸೋರಿಕೆ ಆಗುವುದನ್ನು ತಡೆಯಲು ನಿಯಮ ಸರಳೀಕರಣ ಮಾಡಲಾಗಿದೆ.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್

ಡಿಜಿ– ಕಂದಾಯ ಯೋಜನೆಯಡಿ ಕಂದಾಯ ಇಲಾಖೆಯ ಗ್ರಾಮ ಅಧಿಕಾರಿಗಳು, ಕಂದಾಯ ಆಡಳಿತ ಅಧಿಕಾರಿಗಳಿಗೆ 3500 ಕ್ರೋಮ್ಬುಕ್ ಖರೀದಿಸಿ, ವಿತರಿಸಲು ತೀರ್ಮಾನಿಸಲಾಗಿದೆ.

ಇದರ ಒಟ್ಟು ವೆಚ್ಚ ₹19.25 ಕೋಟಿ. ಪ್ರತಿ ಕ್ರೋಮ್ಬುಕ್ನ ಬೆಲೆ ₹55,000 ಎಂದು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು

ಹಿರಿಯರಿಗೆ ‘ವಯೋ ವಂದನಾ’

ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 70 ವರ್ಷ ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ ಹಿರಿಯರಿಗೆ (ಇಎಸ್ಐಎಸ್ ಫಲಾನುಭವಿಗಳು) ಆರೋಗ್ಯ ಸೇವೆಗಳ ಪ್ರಯೋಜನ ವಿಸ್ತರಿಸಲು ಸಂಪುಟ ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಮಾರ್ಗಸೂಚಿಗಳ ಪ್ರಕಾರ ‘ಅನ್ನಭಾಗ್ಯ’ ಯೋಜನೆ ಫಲಾನುಭವಿಗಳು, ಅಂಗನವಾಡಿಗೆ ದಾಖಲಾಗಿರುವ ಮಕ್ಕಳ ಕುಟುಂಬದ ಹಿರಿಯರಿಗೆ ಈ ಸೇವೆ ಲಭ್ಯವಾಗಲಿದೆ ಎಂದು ಪಾಟೀಲ ಹೇಳಿದರು.

ಇವಿಎಂ ಬದಲು ಮತಪತ್ರ ಸುಗ್ರೀವಾಜ್ಞೆ ಇಲ್ಲ

ಜಿಬಿಎ ಮತ್ತು ಇತರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲು ಮತ ಪತ್ರಬಳಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸದಿರಲು ಸರ್ಕಾರ ತೀರ್ಮಾನಿಸಿದೆ.

ತಿದ್ದುಪಡಿ ಮಾಡಿದ ಬಳಿಕ ಸುಗ್ರೀವಾಜ್ಞೆ ಹೊರಡಿಸಲು ಕಳೆದ ಸಚಿವ ಸಂಪುಟ ಸಭೆಯಲ್ಲಿ
ತೀರ್ಮಾನಿಸಲಾಗಿತ್ತು. ಆದರೆ, ಇಂದು ಈ ವಿಷಯ ಚರ್ಚೆಗೆ ಬರಲಿಲ್ಲ. ‘ಕಾನೂನಿಗೆ ತಿದ್ದುಪಡಿ ಮಾಡಬೇಕು. ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ಇವಿಎಂ ಅಥವಾ ಮತಪತ್ರ ಎರಡರಲ್ಲಿ ಯಾವುದಾದರೂ ಒಂದನ್ನು ಬಳಸಬಹುದು ಎಂಬ ಅಂಶ ಸುಪ್ರೀಂಕೋರ್ಟ್ನ ಒಂದು ತೀರ್ಪಿನಲ್ಲಿದೆ. ಹೀಗಾಗಿ ಸುಗ್ರೀವಾಜ್ಞೆಯ ಅವಶ್ಯ ಬೀಳದು ಎಂಬ ಚರ್ಚೆ ನಡೆದಿದೆ’ ಎಂದು ಮೂಲಗಳು ಹೇಳಿವೆ.

ಪ್ರಮುಖ ತೀರ್ಮಾನಗಳು:

*ಸರ್ಕಾರಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಮುದ್ರಿಸುವ ಮತ್ತು ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಹೆಸರುಗಳನ್ನು 9 ಅಥವಾ 9 ಕ್ಕೆ ಮೀರದಂತೆ, ಅನಿವಾರ್ಯ ಸಂದರ್ಭದಲ್ಲಿ 13ಕ್ಕೆ ಮೀರದಂತೆ ಆಯ್ಕೆ ಮಾಡಲು ಶಿಷ್ಟಾಚಾರದ ಮಾರ್ಗಸೂಚಿ ಪರಿಷ್ಕರಣೆ. ಕಾರ್ಯಕ್ರಮದಲ್ಲಿ ಹಾಜರಾಗುವವರ ಹೆಸರನ್ನು ಆಹ್ವಾನಪತ್ರದಲ್ಲಿ ಪ್ರಕಟಿಸಬೇಕು. ಆಹ್ವಾನಿತರಲ್ಲದವರು ವೇದಿಕೆ ಏರಬಾರದು.

*ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು, ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳ ನವೀಕರಣಕ್ಕೆ ₹542 ಕೋಟಿ

*ಸಂಚಾರಿ ಆರೋಗ್ಯ ಘಟಕಗಳನ್ನು ದುರಸ್ತಿಗೊಳಿಸಿ ಹೊಸದಾಗಿ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿ, ಈ ವಾಹನಗಳನ್ನು ಕನೆಕ್ಟೆಡ್ ಹೆಲ್ತ್ ಇಕೋ–ಸಿಸ್ಟಮ್ ಘಟಕಗಳಾಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ₹12.25 ಕೋಟಿ. ವಾಹನಗಳ ವಾರ್ಷಿಕ ನಿರ್ವಹಣೆಗಾಗಿ ₹14.70 ಕೋಟಿ

*ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯ ಸುಂಕ ಸಂಗ್ರಹಣೆಯನ್ನು ಹೆಚ್ಚಿಸಲು ಲೇಬರ್ ಸೆಸ್ ಟ್ರ್ಯಾಕಿಂಗ್ ಅಂಡ್ ಮಾನಿಟರಿಂಗ್ ಸಿಸ್ಟಮ್ ಸಾಫ್ಟ್ವೇರ್ ಎಂಬ ನೂತನ ತಂತ್ರಾಂಶ ಅಭಿವೃದ್ಧಿಪಡಿಸಲು ₹28.19 ಕೋಟಿ. ಸುಂಕ ಮೊತ್ತವನ್ನು ಸರಿಯಾಗಿ ಸಂಗ್ರಹಿಸಲು ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುವುದು.

*ಕರ್ನಾಟಕ ಭೌಗೋಳಿಕ ಮಾಹಿತಿ ವ್ಯವಸ್ಥೆ 2.0 (ಕೆ.ಜಿಐಎಸ್ 2.0) ಅನ್ನು ಅನುಷ್ಠಾನಗೊಳಿಸಲು ₹150 ಕೋಟಿ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ವತಿಯಿಂದ ಇದನ್ನು ಅನುಷ್ಠಾನಗೊಳಿಸಲಾಗುವುದು. ದತ್ತಾಂಶ ಸಂಗ್ರಹ ಸ್ಥಳ, ಹೋಸ್ಟಿಂಗ್ ಮೂಲ ಸೌಕರ್ಯ ಮತ್ತು ಅದರ ಭದ್ರತೆ ಕೈಗೊಳ್ಳಲಾಗುವುದು. ಡ್ರೋನ್ ಮತ್ತು ಉಪಗ್ರಹ ಸೆರೆ ಹಿಡಿದ ಚಿತ್ರಗಳನ್ನು ಸ್ವಯಂ ಚಾಲಿತವಾಗಿ ಅಳವಡಿಸಿಕೊಳ್ಳುತ್ತದೆ

*ಬಯೋ ಡೀಸೆಲ್(ಬಿ–100) ಅನ್ನು ಹೈ ಸ್ಪೀಡ್ ಡೀಸೆಲ್ನೊಂದಿಗೆ ಮಿಶ್ರಣ ಮಾಡುವ (ಪರವಾನಗಿ) ಆದೇಶ 2025 ಕರಡು ಅಧಿಸೂಚನೆಗೆ ಅನುಮೋದನೆ.

* ಪಿಎಂ ಕುಸುಮ್–ಬಿ ಯೋಜನೆಯಡಿ ನೆಟ್ವರ್ಕ್ ಗ್ರಿಡ್ನಿಂದ ಎಷ್ಟೇ ದೂರದಲ್ಲಿದ್ದರೂ ಸೋಲಾರ್ ಪಂಪ್ಸೆಟ್ಗಳಿಗೆ ಅದರ ವೆಚ್ಚದ ಶೇ 50 ರಷ್ಟು ಮೊತ್ತವನ್ನು ಸಹಾಯಧನ ನೀಡಲು ತೀರ್ಮಾನ. ಇದರಿಂದ ರೈತರ ಬೆಳೆಗಳಿಗೆ ಹಗಲು ನೀರು ನೀಡಬೇಕು ಎಂಬ ಬೇಡಿಕೆ ಈಡೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.