ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

75 ನರ್ಸಿಂಗ್‌ ಕಾಲೇಜುಗಳಿಗೆ ಪ್ರವೇಶ ನಿರ್ಬಂಧ

Published : 10 ಆಗಸ್ಟ್ 2024, 14:25 IST
Last Updated : 10 ಆಗಸ್ಟ್ 2024, 14:25 IST
ಫಾಲೋ ಮಾಡಿ
Comments

ಬೆಂಗಳೂರು: ಅಗತ್ಯ ಬೋಧಕ ಸಿಬ್ಬಂದಿ, ಮೂಲಸೌಕರ್ಯ ಕೊರತೆ ಇರುವ 75 ಖಾಸಗಿ ನರ್ಸಿಂಗ್‌ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರಸಕ್ತ ವರ್ಷ ಪ್ರವೇಶ ನೀಡಬಾರದು ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೂಚಿಸಿದೆ.

ಭಾರತೀಯ ನರ್ಸಿಂಗ್‌ ಪರಿಷತ್ತಿನ ಮಾರ್ಗಸೂಚಿ ಅನುಸರಿಸದ ಬೆಂಗಳೂರಿನ 32, ಮೈಸೂರು, ಮಂಗಳೂರು, ಕಲಬುರಗಿ ಜಿಲ್ಲೆಗಳ ಒಟ್ಟು 43 ಕಾಲೇಜುಗಳಿಗೆ 2024–25ನೇ ಸಾಲಿನ ಪ್ರವೇಶ ನೀಡಬಾರದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ಪತ್ರ ಬರೆದಿದ್ದಾರೆ.

‘ನರ್ಸಿಂಗ್‌ ಕಾಲೇಜುಗಳು 100 ಹಾಸಿಗೆಗಳ ಆಸ್ಪತ್ರೆ, 100 ವಿದ್ಯಾರ್ಥಿಗಳಿಗೆ ಅಗತ್ಯವಾದ ಬೋಧಕ ಸಿಬ್ಬಂದಿ ಹೊಂದಿರಬೇಕು. ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಹೊಂದಿರಬೇಕು. ಆದರೆ, ಕೆಲ ಖಾಸಗಿ ನರ್ಸಿಂಗ್‌ ಕಾಲೇಜುಗಳು  ಮಾನದಂಡಗಳನ್ನು ಉಲ್ಲಂಘಿಸಿವೆ. ಹಾಗಾಗಿ, ಪ್ರವೇಶ ನೀಡದಂತೆ ಸೂಚಿಸಲಾಗಿದೆ’ ಎಂದು ಕುಲಪತಿ ಎಂ.ಕೆ. ರಮೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ 615 ನರ್ಸಿಂಗ್‌ ಕಾಲೇಜುಗಳಿವೆ. 2023–24ನೇ ಸಾಲಿನಿಂದ ಶೇ 80ರಷ್ಟು ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಂಚಿಕೆ ಮಾಡುತ್ತಿದೆ. ಶೇ 20 ಸೀಟುಗಳನ್ನು ಆಡಳಿತ ಮಂಡಳಿಗೆ ನೀಡಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT