ಮೈಸೂರು: ‘ ಮುಡಾ ಹಗರಣಕ್ಕೆ ಸಂಬಂಧಿಸಿದ ಬಹುತೇಕ ದಾಖಲೆಗಳು ಈಗಾಗಲೇ ಬೆಂಗಳೂರಿಗೆ ರವಾನೆ ಆಗಿವೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮನೆ ಮೇಲೆ ದಾಳಿ ನಡೆಸಿದರೆ ಇ.ಡಿ.ಗೆ ಎಲ್ಲ ದಾಖಲೆಗಳು ಸಿಗಲಿವೆ’ ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.

‘ಮುಡಾ ಹಗರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಮುಡಾ ಕಚೇರಿಯಲ್ಲಿ ಇ.ಡಿ.ಗೆ ಸಿಕ್ಕಿಲ್ಲ. ವೈಟ್ನರ್ ಹಾಕಿದ ದಾಖಲೆ ಮುಡಾ ಕಡತದಿಂದ ನಾಪತ್ತೆ ಆಗಿದೆ. ಇನ್ನೂ ಹತ್ತು ಹಲವು ದಾಖಲೆಗಳ ಕಡತಗಳೇ ಸಿಗುತ್ತಿಲ್ಲ ಎಂಬ ಮಾತಿದೆ. ಯಾರು ಯಾರ ಮೇಲೆ ಅನುಮಾನ ಇದೆಯೇ ಅವರೆಲ್ಲರ ಮನೆ ಮೇಲೆ ಇ.ಡಿ. ಅಧಿಕಾರಿಗಳು ಶೋಧ ನಡೆಸಬಹುದು’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಿರೀಕ್ಷಿತ ದಾಳಿ

‘ಲೋಕಾಯುಕ್ತದ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿ ತನ್ನ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸುವುದು ಸಾಧ್ಯವಿಲ್ಲ. ಹೀಗಾಗಿಯೇ ಇ.ಡಿ. ದಾಳಿ ಮಾಡಿ ತನಿಖೆ ನಡೆಸಿದೆ. ಇದು ನಿರೀಕ್ಷಿತ’ ಎಂದು ಶ್ರೀವತ್ಸ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.