ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 16ರಿಂದ18ರಂದು ವಿದ್ಯಾಗಿರಿಯಲ್ಲಿ ನಡೆಯುವ 15ನೇ ವರ್ಷದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಉತ್ಸವ ಆಳ್ವಾಸ್ ನುಡಿಸಿರಿ 2018ರ ಸಮ್ಮೇಳನದ ಅಧ್ಯಕ್ಷರಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಡಾ. ಮಲ್ಲಿಕಾ ಎಸ್.ಘಂಟಿ ಹಾಗೂ ಉದ್ಘಾಟಕರಾಗಿ ಬಳ್ಳಾರಿ ಜಿಲ್ಲೆಯ ಹಡಗರಿ ತಾಲ್ಲೂಕಿನ ಡಾ.ಷ.ಶೆಟ್ಟರ್ ಅವರನ್ನು ಆಯ್ಕೆ ಮಾಡಲಾಗಿದೆ.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಬಾರಿ 'ಕರ್ನಾಟಕದರ್ಶನ- ಬಹುರೂಪಿ ಆಯಾಮಗಳು' ಎಂಬ ಪ್ರಧಾನ ಪರಿಕಲ್ಪನೆಯೊಂದಿಗೆ ಆಳ್ವಾಸ್ ನುಡಿಸಿರಿ ಸಮ್ಮೇಳನ ನಡೆಯಲಿದೆ ಎಂದರು.

ಡಾ. ಮಲ್ಲಿಕಾ ಎಸ್.ಘಂಟಿ: ಬಸವನಬಾಗೇವಾಡಿ ತಾಲೂಕಿನ ಅಗಸಬಾಳು ಇಲ್ಲಿಯವರಾದ ಮಲ್ಲಿಕಾ ಎಸ್. ಘಂಟಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಹಾಗೂ 'ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ'ವೆಂಬ ವಿಷಯಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಕುಲಪತಿಗಳಾಗಿರುವ ಇವರು ಸಾಹಿತಿ, ವಿಮರ್ಶಕಿ, ಸಂಶೋಧಕಿ, ಸಂಪಾದಕಿಯಾಗಿ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಅನೇಕ ಕವನ ಸಂಕಲನಗಳು, ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇವರು ಸ್ತ್ರೀ ನಿಷ್ಠ ವಿಮರ್ಶಕರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಸಿಂಧೂರ ದತ್ತಿನಿಧಿ ಪ್ರಶಸ್ತಿ, ಸುಧಾಮೂತರ್ಿ ಪ್ರಶಸ್ತಿ,ಕಾವ್ಯಾನಂದ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ ಮೊದಲಾದ ಅಸಂಖ್ಯ ಪ್ರಶಸ್ತಿಗಳು ಸಂದಿವೆ.

ಡಾ.ಷ.ಶೆಟ್ಟರ್: ಬಳ್ಳಾರಿ ಜಿಲ್ಲೆಯ ಹಂಪಸಾಗರದಲ್ಲಿ ಜನಿಸಿದ ಡಾ.ಷ.ಶೆಟ್ಟರ್ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಐದು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತುಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿಗಳನ್ನು ಇವರು ಪಡೆದಿದ್ದಾರೆ. ಇತಿಹಾಸ ಮತ್ತು ಸಾಹಿತ್ಯಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿರುವ ಶೆಟ್ಟರ್ ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಗಳನ್ನು ಮುರಿದುಕಟ್ಟುವ ಕೆಲಸದಲ್ಲಿ ಅವಿಶ್ರಾಂತರಾಗಿ ನಿರತರು. ಭಾಷಾಶಾಸ್ತ್ರ, ಪ್ರಾಚೀನ ಕನ್ನಡದ ಕ್ಷೇತ್ರಗಳಲ್ಲಿ ಅವರಕೊಡುಗೆ ಅಪಾರ. ಸಾಹಿತ್ಯ ಅಕಾಡೆಮಿಯ ಭಾಷಾಭೂಷಣ ಸಮ್ಮಾನ್, ಚಾವುಂಡರಾಯ ಪ್ರಶಸ್ತಿ, ಶಂಭಾ-ಜೋಶಿ ಪ್ರಶಸ್ತಿ, ಲಲಿತಕಲಾ ವಾರ್ಷಿಕ ಪ್ರಶಸ್ತಿ, ಆಚಾರ್ಯಕುಂದಕುಂದ ಸಹಿತ ಹಲವಾರುಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.