ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ– ಅಮಿತ್‌ ಶಾ | ನ್ಯಾಯ–ಅನ್ಯಾಯದ ರಾಜಕೀಯ

Published : 2 ಏಪ್ರಿಲ್ 2024, 23:48 IST
Last Updated : 2 ಏಪ್ರಿಲ್ 2024, 23:48 IST
ಫಾಲೋ ಮಾಡಿ
Comments

ಬೆಂಗಳೂರು: ಲೋಕಸಭೆ ಚುನಾವಣೆ ಅಖಾಡ ರಂಗೇರುತ್ತಿದ್ದು, ಚುನಾವಣೆ ಘೋಷಣೆ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಕಾಲಿಟ್ಟ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯಕ್ಕೆ ಕೇಂದ್ರ ‘ನ್ಯಾಯ’ ಕೊಟ್ಟಿದೆ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೂ ಅಬ್ಬರಿಸುತ್ತಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅನ್ಯಾಯ’ದ ಪಟ್ಟಿ ಕೊಟ್ಟಿದ್ದಾರೆ.

ಬೆಂಗಳೂರು, ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ಪ್ರತ್ಯೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಕುರ್ಚಿಗಾಗಿ ಕಚ್ಚಾಡುತ್ತಿರುವ ಮುಖ್ಯಮಂತ್ರಿ–ಉಪಮುಖ್ಯಮಂತ್ರಿ ಬರಪರಿಹಾರದಲ್ಲಿ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಕಿಡಿಕಾರಿದ್ದಾರೆ. ‘ಅಮಿತ್ ಶಾ ಮಹಾ ಸುಳ್ಳ’ ಎಂದು ಜರಿದಿರುವ ಸಿದ್ದರಾಮಯ್ಯ, ಹೇಳಿದ ಮಾತನ್ನೇ ಮರೆತಿದ್ದೀರಿ ಎಂದು ಕುಟುಕಿದ್ದಾರೆ. 

ಅಮಿತ್‌ ಶಾ ವಾದ

  • ಕರ್ನಾಟಕ ಬರದಿಂದ ಸಂಕಷ್ಟಕ್ಕೆ ತುತ್ತಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಬರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೂ ಅಲ್ಲದೇ, ಪರಿಹಾರಕ್ಕೆ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದೆ. ಈಗ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. 

  • ಯುಪಿಎ ಅವಧಿಯ 10 ವರ್ಷ ಮತ್ತು ನಮ್ಮ ಅವಧಿಯ ಹತ್ತು ವರ್ಷಗಳ ಲೆಕ್ಕ ಕೊಡಲು ಬಂದಿದ್ದೇನೆ.

  • ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ 10 ವರ್ಷದಲ್ಲಿ ಕರ್ನಾಟಕಕ್ಕೆ ₹1.42 ಲಕ್ಷ ಕೋಟಿ ಕೊಟ್ಟರೆ, ಮೋದಿ ನೇತೃತ್ವದ ಎನ್‌ಡಿಎ 10 ವರ್ಷಗಳಲ್ಲಿ ₹4.91 ಲಕ್ಷ ಕೋಟಿ ಕೊಟ್ಟಿದೆ. ಯುಪಿಎ ಅವಧಿಗಿಂತ ಮೂರು ಪಟ್ಟು ಹೆಚ್ಚು ಹಣ ನೀಡಿದ್ದೇವೆ.

  • ಕರ್ನಾಟಕದ ಜನ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೇ. ಇವೆಲ್ಲದರ ಪರಿಣಾಮ ಕರ್ನಾಟಕದಲ್ಲಿ ಅಭಿವೃದ್ಧಿಯೇ ನಿಂತು ಹೋಗಿದೆ

  • ಬೆಂಗಳೂರು ಅಭಿವೃದ್ಧಿಗೆ ಮೋದಿಯವರು ನೀಡಿದಷ್ಟು ಕೊಡುಗೆಯನ್ನು ಬೇರೆ ಯಾರೂ ಕೊಟ್ಟಿಲ್ಲ. ರಸ್ತೆಗಳು, ರೈಲ್ವೆ ವ್ಯವಸ್ಥೆ, ವಿಮಾನ ನಿಲ್ದಾಣಗಳು, ಮೆಟ್ರೊ ಇವೆಲ್ಲದಕ್ಕೂ ಅತಿ ಹೆಚ್ಚಿನ ಅನುದಾನ ನೀಡಿದ್ದೇವೆ.

ಸಿದ್ದರಾಮಯ್ಯ ಪ್ರತಿವಾದ
  • ಕರ್ನಾಟಕ ಬರದಿಂದ ಸಂಕಷ್ಟಕ್ಕೆ ತುತ್ತಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಬರದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೂ ಅಲ್ಲದೇ, ಪರಿಹಾರಕ್ಕೆ ಮೂರು ತಿಂಗಳು ತಡವಾಗಿ ಮನವಿ ಸಲ್ಲಿಸಿದೆ. ಈಗ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ. 

  • ಯುಪಿಎ ಅವಧಿಯ 10 ವರ್ಷ ಮತ್ತು ನಮ್ಮ ಅವಧಿಯ ಹತ್ತು ವರ್ಷಗಳ ಲೆಕ್ಕ
    ಕೊಡಲು ಬಂದಿದ್ದೇನೆ.

  • ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ 10 ವರ್ಷದಲ್ಲಿ ಕರ್ನಾಟಕಕ್ಕೆ ₹1.42 ಲಕ್ಷ ಕೋಟಿ ಕೊಟ್ಟರೆ, ಮೋದಿ ನೇತೃತ್ವದ ಎನ್‌ಡಿಎ 10 ವರ್ಷಗಳಲ್ಲಿ ₹4.91 ಲಕ್ಷ ಕೋಟಿ ಕೊಟ್ಟಿದೆ. ಯುಪಿಎ ಅವಧಿಗಿಂತ ಮೂರು ಪಟ್ಟು ಹೆಚ್ಚು ಹಣ ನೀಡಿದ್ದೇವೆ.

  • ಕರ್ನಾಟಕದ ಜನ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಬಗ್ಗೆ ಎಲ್ಲರಿಗೂ ಗೊತ್ತಿರುವಂತಹದ್ದೇ. ಇವೆಲ್ಲದರ ಪರಿಣಾಮ ಕರ್ನಾಟಕದಲ್ಲಿ ಅಭಿವೃದ್ಧಿಯೇ
    ನಿಂತು ಹೋಗಿದೆ.

  • ಬೆಂಗಳೂರು ಅಭಿವೃದ್ಧಿಗೆ ಮೋದಿಯವರು ನೀಡಿದಷ್ಟು ಕೊಡುಗೆಯನ್ನು ಬೇರೆ ಯಾರೂ ಕೊಟ್ಟಿಲ್ಲ. ರಸ್ತೆಗಳು, ರೈಲ್ವೆ ವ್ಯವಸ್ಥೆ, ವಿಮಾನ ನಿಲ್ದಾಣಗಳು, ಮೆಟ್ರೊ ಇವೆಲ್ಲದಕ್ಕೂ ಅತಿ ಹೆಚ್ಚಿನ ಅನುದಾನ ನೀಡಿದ್ದೇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT