ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

10 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳಿಗೆ ಟೆಂಡರ್‌ ಇಲ್ಲದೆ ಟಿ.ವಿ ಖರೀದಿ

Published : 5 ಫೆಬ್ರುವರಿ 2026, 20:02 IST
Last Updated : 5 ಫೆಬ್ರುವರಿ 2026, 20:02 IST
ಫಾಲೋ ಮಾಡಿ
Comments
‘ಗೋದಾಮಿನಲ್ಲೇ ಉಳಿದ ಸಾಮಗ್ರಿ’
‘ಬಹುತೇಕ ತಾಲ್ಲೂಕುಗಳಿಗೆ ಈಗಾಗಲೇ ಟಿ.ವಿ ಸರಬರಾಜು ಮಾಡಲಾಗಿದ್ದು, ಕೆಲವೆಡೆ ಅಂಗನವಾಡಿಗಳಿಗೆ ತಲುಪಿಯೇ ಇಲ್ಲ. ಗೋದಾಮುಗಳಲ್ಲೇ ಸಂಗ್ರಹಿಸಿ ಇಡಲಾಗಿದೆ. ತಲುಪಿದ ಅಂಗನವಾಡಿಗಳಲ್ಲಿ ಅವುಗಳನ್ನು ಅಳವಡಿಸಲು ಅಗತ್ಯ ವ್ಯವಸ್ಥೆ ಇಲ್ಲ. ಮಕ್ಕಳ ಕಲಿಕೆಗೆ ಅಗತ್ಯವಾದ ಕಾರ್ಯಕ್ರಮಗಳ ಸಾಫ್ಟ್‌ವೇರ್‌ ಒಳಗೊಂಡ ಪೆನ್‌ಡ್ರೈವ್‌ ಒದಗಿಸಲಿಲ್ಲ. ಕೆಲ ತಾಲ್ಲೂಕುಗಳಲ್ಲಿ ಪೂರೈಸಲಾಗಿರುವ ಟಿ.ವಿಗಳಿಗೆ ನೀಡುವಷ್ಟು ಹಣ ಆಡಳಿತಾತ್ಮಕ ನಿಧಿಯಲ್ಲಿ ಇಲ್ಲ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಲ್ಲಿ ಒಬ್ಬರು.
ಆಹಾರ ಪದಾರ್ಥ, ಟಿ.ವಿ ಸೇರಿದಂತೆ ಯಾವುದೇ ಸಾಮಗ್ರಿಗಳ ಖರೀದಿ, ಸರಬರಾಜು ವಿಕೇಂದ್ರೀಕರಣಗೊಳ್ಳಬೇಕು. ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಹೇರಬಾರದು.
– ಎಸ್‌. ವರಲಕ್ಷ್ಮಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ 
ಹಣಕಾಸು ವರ್ಷ ಮುಗಿಯುತ್ತಾ ಬಂದಿದ್ದು, ಕೇಂದ್ರ ಪುರಸ್ಕೃತ ಯೋಜನೆಯ ಹಣವನ್ನು ಬಳಕೆ ಮಾಡಿಕೊಳ್ಳಲು ನಿಯಮದಂತೆ ಟಿ.ವಿಗಳನ್ನು ಖರೀದಿಸಲು ಸೂಚಿಸಲಾಗಿದೆ. ದುರ್ಬಳಕೆ ಆಗಿಲ್ಲ.
– ಮಹೇಶ್‌ ಬಾಬು, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT