ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ಬಾನಂಗಳದಲ್ಲಿ ಭಾನುವಾರ ಬೆಳಿಗ್ಗೆ ಯಾಂತ್ರಿಕ ಪ್ಯಾರಾ ಗ್ಲೈಡರ್ (ಮೈಕ್ರೊಲೈಟ್) ಹಾರಾಟ ನಡೆಸಿದ್ದರಿಂದ ಅದರ ಶಬ್ದಕ್ಕೆ ಕೆಲ ಸಮಯ ಪಕ್ಷಿಗಳು ಬೆದರಿ ಚೀರಾಡಿದವು, ಗೂಡು ಬಿಟ್ಟು ತೆರಳಿದವು.

ಪಕ್ಷಿಧಾಮದಲ್ಲಿ 155 ಪ್ರಭೇದಗಳ ಪಕ್ಷಿಗಳಿವೆ. ಇದು, ಕೆಲ ಪಕ್ಷಿಗಳಿಗೆ ಸಂತಾನೋತ್ಪತ್ತಿಯ ಅವಧಿ. ಈ ಪ್ರದೇಶದಲ್ಲಿ ಡ್ರೋನ್ ಬಳಕೆಯನ್ನೂ ಸಂಪೂರ್ಣ ನಿಷೇಧಿಸಲಾಗಿದೆ. ಆದರೆ, ಡ್ರೋನ್ಗಿಂತಲೂ ದೊಡ್ಡದಾದ ಪ್ಯಾರಾ ಗ್ಲೈಡರ್ ಇಲ್ಲಿ ಹಾರಾಟ ನಡೆಸಿದೆ.

ಪ್ಯಾರಾ ಗ್ಲೈಡರ್ ಹಾರಾಡುತ್ತಿದ್ದಂತೆಯೇ ವಲಸೆ ಬಂದಿರುವ ಬಾನಾಡಿಗಳಾದ ಗಾರ್ಗೆನಿ (ಬಿಳಿಹುಬ್ಬಿನ ಬಾತು), ನಾರ್ಥರ್ನ್ ಪಿಂಟೈಲ್ (ಸೂಜಿಬಾಲದ ಬಾತು), ನಾರ್ಥರ್ನ್ ಶೋವೆಲರ್ (ಚಲುಕ ಬಾತು), ಕಾಮನ್ಟೀಲ್ (ಸೋಲರಿ ಹಕ್ಕಿ), ಯುರೇಷಿಯನ್ ವಿಜನ್ (ನಾಮದ ಬಾತು) ಸೇರಿ ಹಲವು ಪಕ್ಷಿಗಳು ಬೆದರಿ ಹಾರಾಡಿದವು. ಗಿಡಮರಗಳಲ್ಲಿ ನೆಲೆಕಂಡಿರುವ ಕೆಲ ಪಕ್ಷಿಗಳ ಮರಿಗಳು ಮತ್ತು ಮೊಟ್ಟೆಗಳು ನೀರಿಗೆ ಬಿದ್ದವು.

ಹೊಸಪೇಟೆಯ ಉದ್ಯಮಿಯೊಬ್ಬರು ಅಪರೂಪದ ಪಕ್ಷಿಗಳ ಚಲವನವಲನ ಗಮನಿಸಲು ಪಕ್ಷಿಧಾಮ ಮತ್ತು ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಪ್ಯಾರಾಗ್ಲೈಡರ್ ಬಳಸಿದ್ದಾರೆ ಎನ್ನಲಾಗಿದೆ. ಗ್ಲೈಡರ್ನಲ್ಲಿ ಇಬ್ಬರಿದ್ದರು.

ಪ್ಯಾರಾಗ್ಲೈಡರ್ ಹಾರಾಟಕ್ಕೆ ಪಕ್ಷಿ ಮತ್ತು ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ. ‘ಜೀವ ವೈವಿಧ್ಯದ ಪಕ್ಷಿಧಾಮದಲ್ಲಿ ಬಾನಾಡಿಗಳ ಆವಾಸಕ್ಕೆ ಇದರಿಂದ ತೊಂದರೆ ಆಗಲಿದೆ. ಇದು ಮುಂದುವರಿದರೆ ಪಕ್ಷಿಗಳು ವಲಸೆ ನಿಲ್ಲಿಸುವ ಅಪಾಯವಿದೆ. ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ವಾರೆ.

ಅಂಕಸಮುದ್ರ ಪಕ್ಷಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾವಲುಗಾರರಿಂದ ಮಾಹಿತಿ ಪಡೆಯಲಾಗುವುದು. ಬಳಿಕ ಕ್ರಮ ಕುರಿತು ಆಲೋಚಿಸಲಾಗುವುದು

-ಉಮೇಶ್ನಾಯ್ಕ, ವಲಯ ಅರಣ್ಯಾಧಿಕಾರಿ, ಹೂವಿನಹಡಗಲಿ