ಬೆಂಗಳೂರು: ಖಗೋಳ ವಿಜ್ಞಾನಿ ಡಾ.ಜಿ.ಸಿ. ಅನು ಪಮಾ ಅವರು ಭಾರತೀಯ ಖಗೋಳ ವಿಜ್ಞಾನ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಅನುಪಮಾ ಅವರು ಈ ಸಂಸ್ಥೆಗೆ ಅಧ್ಯಕ್ಷರಾಗುತ್ತಿರುವ ಮೊದಲ ಮಹಿಳೆ ಮತ್ತು ಡಾ.ಯು.ಆರ್.ರಾವ್ ಅವರ ಬಳಿಕ ಆಯ್ಕೆಯಾಗಿರುವ ಎರಡನೇ ಕನ್ನಡಿಗರು. ಮಂಗಳವಾರ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಅನುಪಮಾ ಅವರಿಗೆ ಅಧಿಕಾರ ಹಸ್ತಾಂತರವಾಗಲಿದೆ.

ಬೆಂಗಳೂರಿನ ಭಾರತೀಯ ಖಗೋಳ ಭೌತ ವಿಜ್ಞಾನ ಸಂಸ್ಥೆಯಲ್ಲಿ ಡೀನ್ ಹಾಗೂ ಹಿರಿಯ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೇಹ್ ಮತ್ತು ಲಡಾಖ್ನಲ್ಲಿ ಹಿಮಾಲಯನ್ ಟೆಲಿಸ್ಕೋಪ್ನ ಸ್ಥಾಪನೆ ಮತ್ತು ವಿನ್ಯಾಸ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶ್ವದಲ್ಲಿ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಟೆಲಿಸ್ಕೋಪ್ ಇದಾಗಿದೆ. ಅಲ್ಲದೆ, ಅಮೆರಿಕದ ಹವಾಯಿಯಲ್ಲಿ ಒಂದು ಶತಕೋಟಿ ಡಾಲರ್ ವೆಚ್ಚದಲ್ಲಿ ಸ್ಥಾಪನೆಗೊಳ್ಳಲಿರುವ ಥರ್ಟಿ ಮೀಟರ್ ಟೆಲಿಸ್ಕೋಪ್(ಟಿಎಂಟಿ) ಅಳವಡಿಕೆಯ ಪ್ರಮುಖ ತಂಡದ ಸದಸ್ಯರೂ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.