ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗಳಲ್ಲಿ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನಕ್ಕೆ ಸಚಿವರ ನೇಮಕ

Last Updated 10 ಸೆಪ್ಟೆಂಬರ್ 2021, 16:38 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಘೋಷಿಸಲಾಗಿರುವ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ಫಲಾನುಭವಿಗಳ ಆಯ್ಕೆ ಮಾಡಲು ನಡೆಯುವ ಸಭೆಯ ಅಧ್ಯಕ್ಷತೆ ವಹಿಸಲು ಸಚಿವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.

ಜಿಲ್ಲೆಗಳಲ್ಲಿ ಕೋವಿಡ್ ಮತ್ತು ನೆರೆ ಪರಿಹಾರ ಉಸ್ತುವಾರಿಗಾಗಿ ನೇಮಕ ಮಾಡಿರುವ ಸಚಿವರಿಗೇ ಅಮೃತ ಮಹೋತ್ಸವ ಯೋಜನೆಗಳ ಅನುಷ್ಠಾನದ ಉಸ್ತುವಾರಿ ವಹಿಸಲಿದ್ದಾರೆ.

ಸಚಿವರ ಹೆಸರು ಮತ್ತು ಜಿಲ್ಲೆಗಳ ವಿವರ ಕೆಳಕಂಡಂತಿದೆ:

1. ಗೋವಿಂದ ಎಂ.ಕಾರಜೋಳ - ಬೆಳಗಾವಿ
2. ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
3. ಆರ್.ಅಶೋಕ್- ಬೆಂಗಳೂರು ನಗರ
4. ಬಿ.ಶ್ರೀರಾಮುಲು- ಚಿತ್ರದುರ್ಗ
5. ವಿ.ಸೋಮಣ್ಣ- ರಾಯಚೂರು
6. ಉಮೇಶ್ ವಿ.ಕತ್ತಿ- ಬಾಗಲಕೋಟೆ
7. ಎಸ್.ಅಂಗಾರ- ದಕ್ಷಿಣ ಕನ್ನಡ
8. ಜೆ.ಸಿ.ಮಾಧುಸ್ವಾಮಿ-ತುಮಕೂರು
9. ಆರಗ ಜ್ಞಾನೇಂದ್ರ- ಚಿಕ್ಕಮಗಳೂರು
10. ಡಾ: ಸಿ.ಎನ್.ಅಶ್ವತ್ಥ್ ನಾರಾಯಣ- ರಾಮನಗರ
11. ಸಿ.ಸಿ.ಪಾಟೀಲ್- ಗದಗ
12. ಆನಂದ್ ಸಿಂಗ್ - ಬಳ್ಳಾರಿ ಮತ್ತು ವಿಜಯನಗರ
13. ಕೋಟ ಶ್ರೀನಿವಾಸ ಪೂಜಾರಿ - ಕೊಡಗು
14. ಪ್ರಭು ಬಿ.ಚೌಹಾಣ್- ಬೀದರ್
15. ಮುರುಗೇಶ್ ನಿರಾಣಿ- ಕಲಬುರಗಿ
16. ಅರಬೈಲ್ ಶಿವರಾಮ್ ಹೆಬ್ಬಾರ್- ಉತ್ತರ ಕನ್ನಡ
17. ಎಸ್.ಟಿ.ಸೋಮಶೇಖರ್- ಮೈಸೂರು ಮತ್ತು ಚಾಮರಾಜನಗರ
18. ಬಿ.ಸಿ.ಪಾಟೀಲ್- ಹಾವೇರಿ
19. ಬಿ.ಎ.ಬಸವರಾಜ್- ದಾವಣಗೆರೆ
20. ಡಾ: ಕೆ.ಸುಧಾಕರ್- ಚಿಕ್ಕಬಳ್ಳಾಪುರ
21.ಕೆ.ಗೋಪಾಲಯ್ಯ- ಹಾಸನ
22. ಶಶಿಕಲಾ ಜೊಲ್ಲೆ- ವಿಜಯಪುರ
23.ಎಂ.ಟಿ.ಬಿ.ನಾಗರಾಜು- ಬೆಂಗಳೂರು ಗ್ರಾಮಾಂತರ
24.ಡಾ: ಕೆ.ಸಿ.ನಾರಾಯಣಗೌಡ- ಮಂಡ್ಯ
25. ಬಿ.ಸಿ.ನಾಗೇಶ್- ಯಾದಗಿರಿ
26. ವಿ.ಸುನೀಲ್ ಕುಮಾರ್- ಉಡುಪಿ
27.ಆಚಾರ್ ಹಾಲಪ್ಪ ಬಸಪ್ಪ- ಕೊಪ್ಪಳ
28.ಶಂಕರ.ಬಿ.ಪಾಟೀಲ್ ಮುನೇನಕೊಪ್ಪ- ಧಾರವಾಡ
29. ಮುನಿರತ್ನ- ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT