ಬೆಂಗಳೂರು: ಇಂದಿರಾನಗರ ಮೆಟ್ರೊ ನಿಲ್ದಾಣದಿಂದ ಎಂಬಸಿ ಗಾಲ್ಫ್ ಲಿಂಕ್ಸ್ ಬ್ಯುಜಿನೆಸ್ ಪಾರ್ಕ್ ತನಕ ‘ನಮ್ಮ ಆಟೊ’ ಎಂಬ ಶೇರಿಂಗ್ ಆಟೊ ಸೌಲಭ್ಯವನ್ನು ‘ನಮ್ಮ ಆಟೊ’ ಚಾಲಕರು ಸಂಸ್ಥೆ ಆರಂಭಿಸಿದೆ.

‘ನಿರ್ದಿಷ್ಟ ಮಾರ್ಗದಲ್ಲಿ ಆಟೊದಲ್ಲಿ ಪ್ರಯಾಣಿಸಬಹುದು. ಇಲ್ಲಿ 12 ನಿಲ್ದಾಣಗಳಿದ್ದು, ಎಲ್ಲೇ ಇಳಿದರೂ ತಲಾ ₹30 ದರ ನೀಡಬೇಕು. ಸಾರಿಗೆ ನಿಯಮದಂತೆ ಮೂವರು ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲಾಗುತ್ತಿದೆ’ ಎಂದು ‘ನಮ್ಮ ಆಟೊ’ ಚಾಲಕರ ಸಹಕಾರ ಸಂಘದ ಉಪಾಧ್ಯಕ್ಷ ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುರೋಪಿಯನ್ ಯೂನಿಯನ್ ಯೋಜನೆಯಡಿ ಎಚ್ಎಐಎಲ್ ಸಂಸ್ಥೆ ಆ್ಯಪ್ ಅಭಿವೃದ್ಧಿಪಡಿಸಿದೆ. ಆ್ಯಪ್ ಬಳಸಿ ಪ್ರಯಾಣಿಕರು ಆಟೋ ರಿಕ್ಷಾ ಹತ್ತಬಹುದು. ನಿಗದಿತ ಸ್ಥಳದಿಂದ ನೇರವಾಗಿ ಬಂದವರೂ ಪ್ರಯಾಣ ಮಾಡಬಹುದು’ ಎಂದು ಅವರು ಹೇಳಿದರು.

‘ಈ ಮಾರ್ಗದಲ್ಲಿ ಆಟೊದಲ್ಲಿ ಪ್ರಯಾಣಿಸುವವರು ₹100ರಿಂದ ₹150 ಪಾವತಿಸಬೇಕಾಗಿತ್ತು. ಈಗ ₹30 ದರದಲ್ಲಿ ಪ್ರಯಾಣಿಸಬಹುದು. ಆಟೊ ಚಾಲಕರು ಕೂಡ ಕನಿಷ್ಠ ₹90 ಸಂಪಾದಿಸಬಹುದು. ಬೇರೆ ಮೆಟ್ರೊ ನಿಲ್ದಾಣಗಳಿಂದಲೂ ಈ ರೀತಿಯ ಸೇವೆ ಕಲ್ಪಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.