ಬೆಂಗಳೂರು: ಅಬಕಾರಿ ಸನ್ನದುಗಳ ನವೀಕರಣ ಶುಲ್ಕವನ್ನು ಶೇ 50ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ಶುಲ್ಕ ಜುಲೈ 1ರಿಂದ ಅನ್ವಯ ಆಗಲಿದೆ.

ನವೀಕರಣ ಶುಲ್ಕವನ್ನು ಈ ಹಿಂದೆ ಶೇ 100ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿತ್ತು. ಆದರೆ, ಮದ್ಯದಂಗಡಿ ಮಾಲೀಕರ ಒತ್ತಾಯಕ್ಕೆ ಮಣಿದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೆ, ಹಾಲಿ ಇದ್ದ ಅಬಕಾರಿ ಸನ್ನದುಗಳ ವಾರ್ಷಿಕ ನವೀಕರಣ ಅವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಿ ಮತ್ತೊಂದು ಆದೇಶ ಹೊರಡಿಸಲಾಗಿದೆ.

20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳ ಮಹಾನಗರ ಪಾಲಿಕೆಗಳ ಪರವಾನಗಿ ನವೀಕರಣ ಶುಲ್ಕ ₹9 ಲಕ್ಷ, ಇತರೆ ಮಹಾನಗರ ಪಾಲಿಕೆಗಳ ಪ್ರದೇಶದಲ್ಲಿ ₹ 7.50 ಲಕ್ಷ, ನಗರಸಭೆ ಪ್ರದೇಶದಲ್ಲಿ ₹ 6.75 ಲಕ್ಷ, ಪಟ್ಟಣ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಪ್ರದೇಶದಲ್ಲಿ ₹ 6 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಜನಸಂಖ್ಯೆ ಆಧಾರದಲ್ಲಿ ಇತರೆ ನಗರ, ಪಟ್ಟಣಗಳಲ್ಲಿ ಶುಲ್ಕ ಹೆಚ್ಚಳ ದರ ವ್ಯತ್ಯಯ ಆಗಲಿದೆ.

ಎಲ್ಲ ರೀತಿಯ ಅಬಕಾರಿ ಸನ್ನದುಗಳ ಶುಲ್ಕವನ್ನು ಶೇ 100 ರಷ್ಟು ಹೆಚ್ಚಿಸಿ ಅಬಕಾರಿ ಇಲಾಖೆ ಮೇ 15ರಂದು ಕರಡು ಅಧಿಸೂಚನೆ ಹೊರಡಿಸಿತ್ತು. ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮದ್ಯ ಮಾರಾಟಗಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸನ್ನದು ಶುಲ್ಕವನ್ನು ಶೇ 20 ರಿಂದ 25ರಷ್ಟು ಮಾತ್ರ ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಿದ್ದರು.

ರಾಜ್ಯದಲ್ಲಿ ಅಬಕಾರಿ ವರ್ಷ ಜುಲೈ 1ರಿಂದ ಆರಂಭವಾಗುತ್ತದೆ. ಆಗ ರಾಜ್ಯದಲ್ಲಿರುವ ಎಲ್ಲ 13 ಸಾವಿರಕ್ಕೂ ಹೆಚ್ಚು ಅಬಕಾರಿ ಸನ್ನದುದಾರರು ತಮ್ಮ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳಬೇಕು. ಒಂಬತ್ತು ವರ್ಷಗಳ ಬಳಿಕ ಎಲ್ಲ ಬಗೆಯ ಪರವಾನಗಿ ಶುಲ್ಕವನ್ನು ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.