ಬೆಂಗಳೂರು: ಮನೆಯ ಎದುರು ಹಾಗೂ ಇತರೆ ಸ್ಥಳಗಳಲ್ಲಿ ನಿಲುಗಡೆ ಮಾಡಿರುವ ದ್ವಿಚಕ್ರ ವಾಹನಗಳನ್ನು ಯಾರೂ ಇಲ್ಲದ ಹೊತ್ತಿನಲ್ಲಿ ಕದಿಯುತ್ತಿದ್ದ ಆರೋಪಿ ಜಮೀರ್ ಪಾಷಾ ಯಾನೆ ‘ಚಿಂದಿ’ಯನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹ 5 ಲಕ್ಷ ಮೌಲ್ಯದ 13 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

‘ಮೋದಿ ಆಸ್ಪತ್ರೆ ಎದುರು ನಿಲ್ಲಿಸಿದ್ದ ಹೀರೊ ಹೊಂಡ ಸ್ಪ್ಲೆಂಡರ್ ಬೈಕ್ ಕಳುವಾಗಿರುವ ಸಂಬಂಧ ವ್ಯಕ್ತಿಯೊಬ್ಬರು ಆಗಸ್ಟ್ 31ರಂದು ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ 24 ಗಂಟೆಗಳೊಳಗೆ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಕೋಲಾರ ಜಿಲ್ಲೆ ಮುಳಬಾಗಿಲಿನವನಾದ ಆರೋಪಿಯು ಕೆ.ಆರ್.ಪುರ, ಬಾಣಸವಾಡಿ, ಕೃಷ್ಣರಾಜ ಮಾರುಕಟ್ಟೆ, ಕಾಡುಗೊಂಡನಹಳ್ಳಿ, ಭಾರತೀನಗರ ಹಾಗೂ ನಗರದ ಇತರೆ ಭಾಗಗಳಿಂದ ಬೈಕ್‌ಗಳನ್ನು ಕದ್ದು ಮುಳಬಾಗಿಲಿಗೆ ಸಾಗಿಸುತ್ತಿದ್ದ. ಅಲ್ಲಿ ಗ್ಯಾರೆಜ್‌ವೊಂದನ್ನು ನಡೆಸುತ್ತಿದ್ದ ಆತ ಕದ್ದ ವಾಹನಗಳ ಬಿಡಿಭಾಗಗಳನ್ನು ತೆಗೆದು ರಿಪೇರಿಗೆ ತರುತ್ತಿದ್ದ ವಾಹನಗಳಿಗೆ ಜೋಡಿಸುತ್ತಿದ್ದ. ಬಸವೇಶ್ವರ ಠಾಣೆ ವ್ಯಾಪ್ತಿಯಲ್ಲಿ ಎರಡು ಬೈಕ್‌ಗಳನ್ನು ಕದ್ದಿರುವ ವಿಚಾರವನ್ನೂ ಆತ ಒಪ್ಪಿಕೊಂಡಿದ್ದಾನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.