ದಾವಣಗೆರೆ: ಕ್ಷಯರೋಗ (ಟಿ.ಬಿ) ನಿರ್ಮೂಲನೆ ಉದ್ದೇಶದಿಂದ ಮೂರು ತಿಂಗಳ ಹಿಂದೆ 15 ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದ ದೇಶದ ಮೊದಲ ‘ವಯಸ್ಕ ಬಿಸಿಜಿ (ಬ್ಯಾಸಿಲಸ್ ಕ್ಯಾಲ್ಮೆಟ್ ಗೆರಿನ್) ಲಸಿಕೆ ಅಭಿಯಾನ’ಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

ಮಹಿಳೆಯರಿಂದ ಅಧಿಕ ಸ್ಪಂದನ ದೊರೆತಿದೆ. ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡ ಜಿಲ್ಲೆಗಳ ಪೈಕಿ ಬೆಳಗಾವಿ ರಾಜ್ಯದಲ್ಲೇ ಅಗ್ರ ಸ್ಥಾನದಲ್ಲಿದೆ. ಕಲಬುರಗಿ, ಬೆಂಗಳೂರು ನಗರ, ವಿಜಯಪುರ ಮತ್ತು ದಾವಣಗೆರೆ ನಂತರದ ನಾಲ್ಕು ಸ್ಥಾನಗಳಲ್ಲಿವೆ. ದಕ್ಷಿಣ ಕನ್ನಡ ಅಂತಿಮ ಸ್ಥಾನದಲ್ಲಿದೆ.

ಆಯ್ಕೆಯಾಗಿದ್ದ ಎಲ್ಲ 15 ಜಿಲ್ಲೆಗಳಲ್ಲಿ ಈವರೆಗೆ 4,16,524 ಜನರಿಗೆ ಬಿಸಿಜಿ ಲಸಿಕೆ ನೀಡಲಾಗಿದೆ. ಇವರಲ್ಲಿ 2,21,204 ಮಹಿಳೆಯರು, 1,94,758 ಪುರುಷರು ಮತ್ತು 562 ಲಿಂಗತ್ವ ಅಲ್ಪಸಂಖ್ಯಾತರು ಸೇರಿದ್ದಾರೆ. ಫಲಾನುಭವಿಗಳ ಲಿಖಿತ ಒಪ್ಪಿಗೆ ಪಡೆದೇ ಸಿಬ್ಬಂದಿ ಅವರಿಗೆ ಲಸಿಕೆ ನೀಡುತ್ತಿದ್ದಾರೆ. ಮೇ ತಿಂಗಳಲ್ಲಿ ಆರಂಭವಾಗಿದ್ದ ಅಭಿಯಾನ ಈ ತಿಂಗಳಾಂತ್ಯಕ್ಕೆ ಬಹುತೇಕ ಕೊನೆಗೊಳ್ಳುವ ಸಾಧ್ಯತೆಯಿದೆ.

ದಾವಣಗೆರೆ ಜಿಲ್ಲೆಯಲ್ಲೇ ಲಸಿಕೆ ಪಡೆಯಲು ಅರ್ಹರಾಗಿರುವ 2.5 ಲಕ್ಷ ಜನರಿದ್ದಾರೆ. ಈ ಪೈಕಿ 30,546 ಜನ ಲಸಿಕೆ ಪಡೆದಿದ್ದಾರೆ. ಜಾಗೃತಿ ಮೂಡಿಸಿ, ಎಲ್ಲರಿಗೂ ಲಸಿಕೆ ನೀಡುವ ವಿಶ್ವಾಸ ಆರೋಗ್ಯ ಇಲಾಖೆಯದ್ದಾಗಿದೆ.

ಯಾರೆಲ್ಲ ಅರ್ಹರು?:

ಐದು ವರ್ಷಗಳಲ್ಲಿ ಕ್ಷಯಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದವರು, 3 ವರ್ಷಗಳಿಂದ ಕ್ಷಯರೋಗಿಗಳ ನಿಕಟ ಸಂಪರ್ಕದಲ್ಲಿ ಇರುವವರು, ದೇಹಗಾತ್ರದ ಸೂಚ್ಯಂಕ (ಬಿಎಂಐ) ಆಧಾರದಲ್ಲಿ ಎತ್ತರಕ್ಕೆ ಸಮನಾದ ದೇಹ ತೂಕ ಇಲ್ಲದವರು, ಧೂಮಪಾನಿಗಳು, ಮಧುಮೇಹ ಇರುವವರು ಮತ್ತು 60 ವರ್ಷ ದಾಟಿದವರು ಈ ಲಸಿಕೆ ಪಡೆಯಲು ಅರ್ಹರು. ಆದರೆ, ಈ ವಿಭಾಗಗಳಡಿ ಬರುವ ಬಹುತೇಕರು ಲಸಿಕೆ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಆಧಿಕಾರಿಗಳು ‘ಪ್ರಜಾವಾಣಿ’ ಎದುರು ಬೇಸರ ವ್ಯಕ್ತಪಡಿಸಿದರು.

ಮೂರು ವರ್ಷಗಳವರೆಗೆ ಲಸಿಕೆ ಹಾಕಿದವರ ಮೇಲೆ ಇಲಾಖೆ ನಿಗಾ ವಹಿಸಲಿದೆ. ನಂತರ ಈ 15 ಜಿಲ್ಲೆಗಳಲ್ಲಿ ವರದಿಯಾದ ಟಿ.ಬಿ ಪ್ರಕರಣಗಳ ಸಂಖ್ಯೆಯನ್ನು ಪರಿಗಣಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

‘ಇದು ಹೊಸ ಲಸಿಕೆ ಅಲ್ಲ. ಕೋವಿಡ್, ಎಚ್1ಎನ್1 ಸೇರಿದಂತೆ ಉಸಿರಾಟದ ಸಮಸ್ಯೆ ಎದುರಿಸುತ್ತಿರುವ ಜನರನ್ನೂ ಈ ಲಸಿಕೆ ರಕ್ಷಿಸುತ್ತದೆ ಎಂಬುದನ್ನು ಕೆಲವು ಅಧ್ಯಯನಗಳು ಉಲ್ಲೇಖಿಸಿವೆ’ ಎಂದು ಜಿಲ್ಲಾ ಕ್ಷಯರೋಗ ಅಧಿಕಾರಿ ಪಿ.ಡಿ. ಮುರಳೀಧರ್ ಮಾಹಿತಿ ನೀಡಿದರು.

ಲಸಿಕೆಯಿಂದ ಅಡ್ಡ ಪರಿಣಾಮ ಇಲ್ಲ. ಶೇ 10ರಷ್ಟು ಜನರಲ್ಲಿ ಲಸಿಕೆ ಹಾಕಲಾದ ಜಾಗದಲ್ಲಿ ಕೀವು ಕಾಣಿಸಬಹುದು. ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಭಿಯಾನ ವ್ಯಾಪ್ತಿಯ ಜಿಲ್ಲೆಗಳ ಸ್ಥಿತಿಯನ್ನು ಉಳಿದ ಜಿಲ್ಲೆಗಳ ಕ್ಷಯದ ಪ್ರಕರಣಗಳ ಜತೆ ಹೋಲಿಸಲಾಗುತ್ತದೆ. ಪ್ರಗತಿ ಆಧರಿಸಿ ಉಳಿದ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ
ಪಿ.ಡಿ. ಮುರಳೀಧರ್ ಜಿಲ್ಲಾ ಕ್ಷಯರೋಗ ಅಧಿಕಾರಿ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.