ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಜೂಜು ಮತ್ತು ಬೆಟ್ಟಿಂಗ್ ನಿಷೇಧಿಸುವ ಪ್ರತಿಬಂಧಕ ಕಾಯ್ದೆಯ ಮಸೂದೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದರು.

ಆನ್‌ಲೈನ್ ಜೂಜು ನಿಷೇಧದ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ. ಈ ಮಸೂದೆಯು ಲಾಟರಿ, ಕುದುರೆ ರೇಸ್‌ಗಳಿಗೆ ಅನ್ವಯವಾಗುವುದಿಲ್ಲ. ಮೊಬೈಲ್, ಕಂಪ್ಯೂಟರ್ ಮತ್ತಿತರ ಆನ್‌ಲೈನ್ ಜೂಜಾಟ ನಡೆಸುವುದು ಮತ್ತು ಬಾಜಿ ಕಟ್ಟುವುದಕ್ಕೆ ಮಾತ್ರ ಅನ್ವಯವಾಗಲಿದೆ ಎಂದರು.

ಕಾನೂನು ಉಲ್ಲಂಘಿಸಿ ಆನ್‌ಲೈನ್ ಜೂಜಿನಲ್ಲಿ ತೊಡಗುವವರು, ಅವರಿಗೆ ಸಹಾಯ ಮಾಡುವವರು ಮತ್ತು ಆಶ್ರಯ ನೀಡುವವರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಲಾಗುವುದು ಎಂದು ಹೇಳಿದರು.

ಸೆಷನ್ ನ್ಯಾಯಾಲಯದ ವಿಚಾರಣೆ ಆನ್‌ಲೈನ್: ಸೆಷನ್ಸ್ ನ್ಯಾಯಾಲಯದ ವಿಚಾರಣೆಗಳನ್ನೂ ಆನ್‌ಲೈನ್ ಮೂಲಕ ನಡೆಸಲು ಸಹಾಯಕವಾಗುವ ‘ದಂಡ ಪ್ರಕ್ರಿಯಾ ಸಂಹಿತೆ ಮಸೂದೆ’ಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಶಿಕ್ಷೆಗೊಳಗಾದ ಅಪರಾಧಿಗಳ ಮಾದರಿ ಸಂಗ್ರಹ: ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟ ಅಪರಾಧಿಗಳ ಬೆರಳಚ್ಚು, ಪಾದದ ಗುರುತಿನ ಜತೆಗೆ ರಕ್ತ, ಡಿಎನ್‌ಎ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯನ್ನು ಸಂಗ್ರಹಿಸಲಾಗುತ್ತದೆ. ಆದರೆ, ವಿಚಾರಣಾಧೀನ ಕೈದಿಗಳಿಂದ ಇವುಗಳನ್ನು ಪಡೆಯುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಗೆ ತಿಳಿಸಿದರು.

ಬಂದಿಗಳ ಗುರುತಿಸುವಿಕೆ ತಿದ್ದುಪಡಿ ಮಸೂದೆಯ ಕುರಿತು ಸ್ಪಷ್ಟನೆ ನೀಡಿದ ಅವರು, ಶಿಕ್ಷೆಗೆ ಒಳಪಡದ ವಿಚಾರಣಾಧೀನ ಕೈದಿಗಳಿಂದ ಮಾದರಿ ಸಂಗ್ರಹಿಸುವುದಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.